ಮಂಗಳವಾರ, ಜುಲೈ 14, 2020
28 °C

World Covid-19 Update: ಅಮೆರಿಕದಲ್ಲಿ ಒಂದೇ ದಿನ 691 ಸಾವು

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

Covid-19

ವಾಷಿಂಗ್ಟನ್: ಜಾನ್ಸ್ ಹಾಪ್ಕಿನ್ಸ್ ಕೊರೊವಾವೈರಸ್ ರಿಸೋರ್ಸ್ ಸೆಂಟರ್ ಮಾಹಿತಿ ಪ್ರಕಾರ ಜಗತ್ತಿನಾದ್ಯಂತ 4,09,886 ಮಂದಿ ಸಾವಿಗೀಡಾಗಿದ್ದಾರೆ. ಬ್ರಿಟನ್‌ನಲ್ಲಿ 40,680 ಮತ್ತು ಬ್ರೆಜಿಲ್‌ನಲ್ಲಿ 36,455 ಮಂದಿ ಸಾವಿಗೀಡಾಗಿದ್ದಾರೆ.

ಜಗತ್ತಿನಾದ್ಯಂತ ಸೋಂಕಿತರ ಸಂಖ್ಯೆ 7053093ಕ್ಕೆ ಏರಿಕೆಯಾಗಿದೆ. ಅಮೆರಿಕದಲ್ಲಿ 1946555 ಮಂದಿಗೆ ಸೋಂಕು ತಗುಲಿದ್ದು ಬ್ರೆಜಿಲ್‌ನಲ್ಲಿ 691758 ಮಂದಿಗೆ ಸೋಂಕು ತಗುಲಿದೆ. ರಷ್ಯಾದಲ್ಲಿ 467,073 ಲಕ್ಷ ಜನರಿಗೆ ಸೋಂಕು ತಗುಲಿ 5,851 ಜನ ಮೃತಪಟ್ಟಿದ್ದಾರೆ.

ಇದನ್ನೂ ಓದಿ: 

ಪಾಕಿಸ್ತಾನದಲ್ಲಿ ಸೋಂಕಿತರ ಸಂಖ್ಯೆ ಭಾನುವಾರ ದಿಡೀರ್ ಏರಿಕೆಯಾಗಿದೆ. ಅಲ್ಲಿ ಈವರೆಗೆ 98,943 ಜನರಿಗೆ ಸೋಂಕು ತಗುಲಿದ್ದು, 2,002 ಸಾವು ಸಂಭವಿಸಿದೆ.

ಕೊರೊನಾದಿಂದಾಗಿ ಈವರೆಗೆ ಬ್ರಿಟನ್‌ನಲ್ಲಿ 40,625, ಸ್ಪೇನ್‌ನಲ್ಲಿ 27,136, ಇಟಲಿಯಲ್ಲಿ 33,899, ಫ್ರಾನ್ಸ್‌ನಲ್ಲಿ 29,158 ಹಾಗೂ ಜರ್ಮನಿಯಲ್ಲಿ 8,685 ಮಂದಿ ಅಸುನೀಗಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು