ಶುಕ್ರವಾರ, ಜೂನ್ 5, 2020
27 °C

ಅಮೆರಿಕ: 10 ಸಾವಿರ ದಾಟಿದ ಸಾವಿನ ಸಂಖ್ಯೆ, ಒಂದೇ ದಿನ 1150 ಬಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್‌: ಅಮೆರಿಕ ಕೋವಿಡ್‌ 19 ಹೊಡೆತಕ್ಕೆ ತತ್ತರಿಸಿ ಹೋಗಿದೆ. ಸೋಂಕಿತರ ಸಂಖ್ಯೆ ದಿನೇ ದಿನೆ ಹೆಚ್ಚುತ್ತಿದ್ದು, ಸಾವಿನ ಪ್ರಮಾಣವೂ ಅಷ್ಟೇ ವೇಗವಾಗಿ ಏರುತ್ತಿದೆ. 

ಕೇವಲ 24 ಗಂಟೆಗಳಲ್ಲಿ ಅಮೆರಿಕದಲ್ಲಿ 1150 ಮಂದಿ ಕೋವಿಡ್‌ ಸೋಂಕಿನಿಂದ ಮೃತಪಟ್ಟಿದ್ದು,  ದೇಶವನ್ನು ತೀವ್ರ ಆತಂಕಕ್ಕೆ ದೂಡಿದೆ. ಇದರೊಂದಿಗೆ ಅಲ್ಲಿ ಈ ವರೆಗೆ ಸೋಂಕಿಗೆ 10,923 ಮಂದಿ ಪ್ರಾಣ ತೆತ್ತಂತಾಗಿದೆ. ನ್ಯೂಯಾರ್ಕ್‌ ನಗರದಲ್ಲಿ ಕೊರೊನಾ ವೈರಸ್‌ ಮರಣ ಮೃದಂಗ ಭಾರಿಸುತ್ತಿದ್ದು ಅಲ್ಲಿ ಈ ವರೆಗೆ 3485 ಜನ ಮೃತಪಟ್ಟಿದ್ದಾರೆ. 

ಸದ್ಯ ಅಮೆರಿಕದಲ್ಲಿ ಒಟ್ಟು 368,079 ಸೋಂಕಿತರಿದ್ದಾರೆ. 

ಕೋವಿಡ್‌ 19 ದೇಶವನ್ನು ಭಾದಿಸುತ್ತಿರುವ ಕುರಿತು ನಿನ್ನೆಯಷ್ಟೇ ಟ್ವೀಟ್‌ ಮಾಡಿದ್ದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಕಣ್ಣಿಗೆ ಕಾಣದ ಈ ಶತ್ರುವಿನ ಬಗ್ಗೆ ನಾವು ಹೆಚ್ಚು ಹೆಚ್ಚು ತಿಳಿದುಕೊಳ್ಳುತ್ತಿದ್ದೇವೆ. ಅದು ಅತ್ಯಂತ ಕಷ್ಟಕರ ಮತ್ತು ಬುದ್ಧಿವಂತಿಕೆಯುಳ್ಳದ್ದು,’ ಎಂದು ಹೇಳಿದ್ದರು.  
ಈ ಮಧ್ಯೆ ಕೊರೊನಾ ವೈರಸ್‌ ಭಾದಿತ ರೋಗಿಗಳ ಚಿಕಿತ್ಸೆಗಾಗಿ ಮಲೇರಿಯಾ ನಿರೋಧಕ ಔಷಧವನ್ನು ನೀಡುವಂತೆ ಡೊನಾಲ್ಡ್‌ ಟ್ರಂಪ್‌ ಭಾರತಕ್ಕೆ ಮನವಿ ಮಾಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು