ಶುಕ್ರವಾರ, ನವೆಂಬರ್ 22, 2019
21 °C

ಎಚ್‌1–ಬಿ ವೀಸಾ: ನಿಯಮ ಬದಲಿಗೆಕೋರ್ಟ್‌ ನಕಾರ

Published:
Updated:

ವಾಷಿಂಗ್ಟನ್‌: ಎಚ್‌1–ಬಿ ವೀಸಾ ಹೊಂದಿರುವ ಉದ್ಯೋಗಿಯ ಪತಿ ಇಲ್ಲವೇ ಪತ್ನಿ ಸಹ ಅಮೆರಿಕದಲ್ಲಿ ಉದ್ಯೋಗಕ್ಕೆ ಸೇರಲು ಅನುವು ಮಾಡಿಕೊಡುವ ನಿಯಮವನ್ನು ರದ್ದು ಮಾಡಲು ಅಮೆರಿಕದ ಕೋರ್ಟ್‌ ನಿರಾಕರಿಸಿದೆ.

ಕೋರ್ಟ್‌ನ ಈ ತೀರ್ಪಿನಿಂದಾಗಿ ಅಮೆರಿಕದಲ್ಲಿರುವ ಭಾರತದ ಉದ್ಯೋಗಿಗಳಿಗೆ ತಾತ್ಕಾಲಿಕ ನೆಮ್ಮದಿ ಸಿಕ್ಕಿದಂತಾಗಿದೆ. 

ಮಾಜಿ ಅಧ್ಯಕ್ಷ ಬರಾಕ್‌ ಒಬಾಮ, 2015ರಲ್ಲಿ ಈ ಕಾನೂನನ್ನು ಜಾರಿಗೆ ತಂದಿದ್ದರು. ಭಾರತೀಯರು, ಅದರಲ್ಲೂ ಮಹಿಳೆಯರಿಗೆ ಈ ನಿಯಮದಿಂದ ಹೆಚ್ಚು ಲಾಭವಾಗುತ್ತಿತ್ತು. ಈ ನಿಯಮವನ್ನು ವಿರೋಧಿಸಿದ ಸ್ಥಳೀಯರು, ಈ ನಿಯಮವನ್ನೇ ರದ್ದು ಮಾಡಲು ಯೋಜಿಸಿದ್ದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಆಡಳಿತಕ್ಕೆ ಬೆಂಬಲ ವ್ಯಕ್ತಪಡಿಸಿದ್ದರು.‌

ಅದರಲ್ಲೂ, ‘ಸೇವ್‌ ಜಾಬ್ಸ್‌ ಯುಎಸ್‌ಎ‌’ ಎಂಬ ಸಂಘಟನೆ ಈ ವಿಷಯವಾಗಿ ಕೋರ್ಟ್‌ ಮೆಟ್ಟಿಲೇರಿತು. ವಿಚಾರಣೆ ನಡೆಸಿದ ಜಿಲ್ಲಾ ಕೋರ್ಟ್‌, ‘ಕೆಳ ಹಂತದ ನ್ಯಾಯಾಲಯವೇ ಈ ವಿಷಯದ ಬಗ್ಗೆ ಮತ್ತೊಮ್ಮೆ ಕೂಲಂಕಷವಾಗಿ ಪರಿಶೀಲನೆ ನಡೆಸಬೇಕು. ಸಾಧಕ–ಬಾಧಕಗಳನ್ನು ಪರಾಮರ್ಶಿಸಿದ ಬಳಿಕ ತನ್ನ ನಿರ್ಧಾರ ಪ್ರಕಟಿಸಬೇಕು’ ಎಂದು ಆದೇಶಿಸಿತು.

ಪ್ರತಿಕ್ರಿಯಿಸಿ (+)