ಮಂಗಳವಾರ, ಏಪ್ರಿಲ್ 7, 2020
19 °C

ಅಮೆರಿಕ ಅಧ್ಯಕ್ಷೀಯ ಚುನಾವಣೆ: ಜೋ ಬಿಡೆನ್‌ ಹಾದಿ ಸುಗಮ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್: ನವೆಂಬರ್‌ನಲ್ಲಿ ನಡೆಯಲಿರುವ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಡೆಮಾಕ್ರಟಿಕ್‌ ಪಕ್ಷದ ಅಭ್ಯರ್ಥಿಯಾಗಿ ಜೋ ಬಿಡೆನ್‌ ಆಯ್ಕೆಯಾಗುವ ದಾರಿ ಸುಗಮವಾಗಿದೆ. ಆದರೆ, ಇನ್ನೂ ಪ್ರಮುಖ ಇಬ್ಬರು ಅಭ್ಯರ್ಥಿಗಳನ್ನು ಎದುರಿಸಬೇಕಾಗಿದೆ.

ಹಾಲಿ ಅಧ್ಯಕ್ಷ ಮತ್ತು ರಿಪಬ್ಲಿಕನ್‌ ಪಕ್ಷದ ಅಭ್ಯರ್ಥಿಯಾಗಲಿರುವ ಡೊನಾಲ್ಡ್‌ ಟ್ರಂಪ್‌ ಅವರನ್ನು ಜೋ ಎದುರಿಸಲಿದ್ದಾರೆ.

‘ಸೂಪರ್‌ ಮಂಗಳವಾರ’ ದಂದು ಸೆನೆಟರ್‌ ಆ್ಯಮಿ ಕ್ಲೊಬುಷರ್‌ ಮತ್ತು ಮಾಜಿ ಮೇಯರ್‌ ಪೆಟೆ ಬುಟ್ಟಿಗಿಗ್‌ ಅವರು ಸ್ಪರ್ಧೆಯಿಂದ ಹಿಂದೆ ಸರಿದು ಜೋ ಬಿಡೆನ್‌ ಅವರನ್ನು ಬೆಂಬಲಿಸುವು ದಾಗಿ ಘೋಷಿಸಿದ್ದಾರೆ. ಜತೆಗೆ ಅಮೆರಿಕದ ಮಾಜಿ ಸಂಸದ ಬೆಟೊ ಒ ರೋರ್ಕೆ ಸಹ ಬಿಡೆನ್‌ ಸ್ಪರ್ಧೆಗೆ ಬೆಂಬಲ ನೀಡಿದ್ದಾರೆ. ಬೆಟೊ ಅವರೂ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದರು. ಈ ಮೂವರ ಬೆಂಬಲದಿಂದ ಬಿಡೆನ್‌ಗೆ ಬಲ ಬಂದಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಡೆನ್‌, ’ಪೆಟೆ, ಆ್ಯಮಿ ಮತ್ತು ಬಿಟೊ ಅವರು ಬೆಂಬಲ ನೀಡಿರುವುದು ಸಂತಸ ತಂದಿದೆ. ಡೊನಾಲ್ಡ್‌ ಟ್ರಂಪ್‌ ಅವರನ್ನು ಸೋಲಿಸಲು ಎಲ್ಲರ ಬೆಂಬಲ ಅಗತ್ಯ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು