ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಫ್ಗನ್‌ನಿಂದ ಅಮೆರಿಕ ಸೈನಿಕರು ಹಿಂದಕ್ಕೆ: ಪ್ರಕ್ರಿಯೆಗೆ ಚಾಲನೆ

Last Updated 10 ಮಾರ್ಚ್ 2020, 19:32 IST
ಅಕ್ಷರ ಗಾತ್ರ

ಕಾಬೂಲ್: ಅಫ್ಗಾನಿಸ್ತಾನದ ಎರಡು ಸೇನಾನೆಲೆಗಳಿಂದ ಅಮೆರಿಕವು ತನ್ನ ಸೈನಿಕರನ್ನು ಹಿಂದಕ್ಕೆ ಕರೆಸಿಕೊಳ್ಳಲು ಆರಂಭಿಸಿದ್ದು ತಾಲಿಬಾನ್ ಶಾಂತಿ ಒಪ್ಪಂದ ಪ್ರಕ್ರಿಯೆಯಲ್ಲಿ ಮೊದಲ ಹೆಜ್ಜೆ ಇಡಲಾಗಿದೆ.

‘ಷರತ್ತುಗಳ ಅನ್ವಯ, ಅಮೆರಿಕ 135 ದಿನಗಳಲ್ಲಿ ತನ್ನ ಸೈನಿಕರ ಸಂಖ್ಯೆಯನ್ನು 8,600ಕ್ಕೆ ಇಳಿಸುವ ಪ್ರಕ್ರಿಯೆಗೆ ಮಂಗಳವಾರ ಚಾಲನೆ ನೀಡಲಾಗಿದೆ’ ಎಂದು ಅಘ್ಗನ್‌ನಲ್ಲಿರುವ ಅಮೆರಿಕದ ಮಿಲಿಟರಿ ವಕ್ತಾರ ಸೋನಿ ಲೆಗ್ಗೆಟ್ ಹೇಳಿಕೆ ನೀಡಿದ್ದಾರೆ.

ಅಮೆರಿಕ ಮತ್ತು ತಾಲಿಬಾನ್ ಫೆ. 29ರಂದು ಶಾಂತಿ ಒಪ್ಪದಕ್ಕೆ ಸಹಿ ಹಾಕಿದ್ದವು. ಈ ಒಪ್ಪಂದದಿಂದ ಅಫ್ಗನ್‌ನಲ್ಲಿ ನಡೆಯುತ್ತಿರುವ ಯುದ್ಧ ಕೊನೆಗಾಣುವಂತಾಗಿದೆ.ಅಫ್ಗನ್‌ನಲ್ಲಿ ಅಮೆರಿಕ ಪ್ರಸ್ತುತ 13 ಸಾವಿರ ಸೈನಿಕರನ್ನು ಹೊಂದಿದ್ದು, ಶಾಂತಿ ಒಪ್ಪಂದದ ಪ್ರಕಾರ, ಜುಲೈ ತಿಂಗಳ ಹೊತ್ತಿಗೆ ಸುಮಾರು 8,600 ಸೈನಿಕರನ್ನು ಕಡಿತಗೊಳಿಸಲಿದೆ. ಒಟ್ಟು 20 ಸೇನಾ ನೆಲೆಗಳ ಪೈಕಿ 5 ನೆಲೆಗಳನ್ನು
ಮುಚ್ಚಲಿದೆ.

ಈ ನಡುವೆ ಅಫ್ಗನ್‌ ಅಧ್ಯಕ್ಷ ಅಶ್ರಫ್ ಘನಿ ತಾಲಿಬಾನ್ ಕೈದಿಗಳನ್ನು ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದ್ದಾರೆ. ಘನಿ ಅವರ ಭರವಸೆಯನ್ನು ಸ್ವಾಗತಿಸುವುದಾಗಿ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯಾ ಪ್ರತಿಕ್ರಿಯಿಸಿದ್ದಾರೆ.

ಸೋಮವಾರ ಆಫ್ಗನ್ ಅಧ್ಯಕ್ಷರಾಗಿ ಅಶ್ರಫ್‌ ಘನಿ ಮತ್ತು ಅಬ್ದುಲ್ಲಾ ಅಬ್ದುಲ್ಲಾ ಪ್ರಮಾಣ ವಚನ ಸ್ವೀಕರಿಸಿದ್ದು, ನಾಯಕತ್ವದ ಕುರಿತು ಗೊಂದಲವುಂಟಾಗಿತ್ತು. ಆದರೆ, ಘನಿ ಅವರು ಶಾಂತಿ ಒಪ್ಪಂದ ಕುರಿತು ಮಾತುಕತೆ ನಡೆಸಲು ತಂಡವನ್ನು ಒಗ್ಗೂಡಿಸುವುದಾಗಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT