ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು 20 ವರ್ಷದ ಹಿಂದೆ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದುನ್ಯೂಯಾರ್ಕ್‌ನ ಲೇಖಕಿ ಹಾಗೂ ಅಂಕಣಗಾರ್ತಿ ಇ ಜೀನ್ ಕೆರೋಲ್ ಅವರು ಆರೋಪಿಸಿದ್ದಾರೆ. ಆದರೆ ಟ್ರಂಪ್ ಇದು ಸುಳ್ಳು ಸುದ್ದಿ ಎಂದು ಪ್ರತಿಕ್ರಿಯಿಸಿದ್ದಾರೆ.
ಕೆರೋಲ್ ತಮ್ಮ ಹೊಸ ಪುಸ್ತಕ ‘ವಾಟ್ ಡು ವಿ ನೀಡ್ ಮೆನ್ ಫಾರ್’ನಲ್ಲಿ ಈ ಕುರಿತು ಬರೆದುಕೊಂಡಿದ್ದಾರೆ.ಇನ್ನಷ್ಟೇ ಬಿಡುಗಡೆಯಾಗಬೇಕಿರುವ ಈ ಪುಸ್ತಕದ ಕೆಲವು ಅಂಶಗಳನ್ನು ನ್ಯೂಯಾರ್ಕ್ ಮ್ಯಾಗಜಿನ್ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. ವೆಬ್‌ಸೈಟ್‌ನಲ್ಲಿರುವ ಲೇಖನದ ಶೀರ್ಷಿಕೆಯಲ್ಲಿ ಟ್ರಂಪ್ ಹೆಸರು ಉಲ್ಲೇಖವಾಗಿದೆ.
‘23 ವರ್ಷಗಳ ಹಿಂದೆ ಭೀಕರ ಮನುಷ್ಯ ಡೊನಾಲ್ಡ್ ಟ್ರಂಪ್,ನ್ಯೂಯಾರ್ಕ್‌ನ ಬರ್ಗ್‌ಡಾರ್ಫ್ ಗುಡ್‌ಮ್ಯಾನ್ ಡಿಪಾರ್ಟ್‌ಮೆಂಟ್ ಸ್ಟೋರ್‌ನ ಡ್ರೆಸ್ಸಿಂಗ್ ರೂಮ್‌ನಲ್ಲಿ ನನ್ನನ್ನುಲೈಂಗಿಕವಾಗಿ ಶೋಷಿಸಿದ್ದಾರೆ. ಆದರೆ ನನ್ನ ಜೀವನದಲ್ಲಿರುವ ಕೆಟ್ಟ ಪುರುಷರ ಪಟ್ಟಿಯಲ್ಲಿ ಇರುವುದುಟ್ರಂಪ್ ಮಾತ್ರ ಅಲ್ಲ’ ಎಂದು ಅವರು ಹೇಳಿಕೊಂಡಿದ್ದಾರೆ.
ಟ್ರಂಪ್ ಹಲವು ದಶಕಗಳಿಂದ ಲೈಂಗಿಕವಾಗಿ ಶೋಷಣೆ ಎಸಗಿದ್ದಾರೆ ಎಂದು ಈ ತನಕ ಸಾರ್ವಜನಿಕವಾಗಿ ಆರೋಪಿಸಿದ 16 ಮಹಿಳೆಯರಲ್ಲಿ ಕೆರೋಲ್ ಸಹ ಸೇರಿದ್ದಾರೆ. ಇವರಲ್ಲಿ ಬಹುತೇಕರು 2016ರ ಚುನಾವಣೆಗೂ ಕೆಲವೇ ವಾರಗಳ ಮೊದಲು ತಮಗಾದ ಶೋಷಣೆ ಕುರಿತು ಬಹಿರಂಗವಾಗಿ ಮಾತನಾಡಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.