ಗುರುವಾರ, 1 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯೂಜಿಲೆಂಡ್: ಜ್ವಾಲಾಮುಖಿ ಸ್ಫೋಟ, ಪತ್ತೆಯಾಗದ ಮೃತದೇಹಗಳು

Last Updated 18 ಡಿಸೆಂಬರ್ 2019, 19:41 IST
ಅಕ್ಷರ ಗಾತ್ರ

ವೆಲ್ಲಿಂಗ್ಟನ್‌ : ಇಲ್ಲಿನ ವೈಟ್ ಐಲ್ಯಾಂಡ್‌ನಲ್ಲಿ ಕಳೆದ ವಾರ ಜ್ವಾಲಾಮುಖಿ ಸ್ಫೋಟಗೊಂಡು 18 ಮಂದಿ ಸಾವಿಗೀಡಾಗಿದ್ದಾರೆ. ಈ ಪೈಕಿ ಇಬ್ಬರ ಮೃತದೇಹಗಳು ಇನ್ನೂ ಪತ್ತೆಯಾಗಿಲ್ಲ ಎಂದು ಬುಧವಾರ ನ್ಯೂಜಿಲೆಂಡ್‌ನ ಅಧಿಕಾರಿಗಳು ತಿಳಿಸಿದ್ದಾರೆ.

ಜ್ವಾಲಾಮುಖಿ ಸ್ಫೋಟದ ನಂತರ ಉಂಟಾದ ಚಂಡಮಾರುತವು, ಮೃತದೇಹಗಳನ್ನು ಪೆಸಿಫಿಕ್ ಮಹಾಸಾಗರದೊಳಕ್ಕೆ ತಳ್ಳಿರಬಹುದು. ಮೃತದೇಹ ಪತ್ತೆಯಾಗುವುದು ಕಷ್ಟ ಎಂದು ಪೊಲೀಸ್ ಡೆಪ್ಯೂಟಿ ಕಮಿಷನರ್ ಮೈಕ್‌ ಕ್ಲೆಮೆಂಟ್ ಹೇಳಿದ್ದಾರೆ.

ನಾಪತ್ತೆಯಾದವರನ್ನು ನ್ಯೂಜಿಲೆಂಡ್‌ನ ಪ್ರವಾಸಿ ಮಾರ್ಗದರ್ಶಿ ಹೇಡಲ್ ಮಾರ್ಷಲ್–ಇನ್ಮನ್ (40) ಮತ್ತು ಆಸ್ಟ್ರೇಲಿಯಾದ ವಿನೋನಾ ಲ್ಯಾಂಗ್ಫೋರ್ಡ್‌ (17) ಎಂದು ಗುರುತಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT