ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾದಿಂದ ಚೇತರಿಸಿದವರಿಗೆ ಮತ್ತೆ ಸೋಂಕು ಬಾರದು ಎಂಬುದಕ್ಕೆ ಪುರಾವೆ ಇಲ್ಲ

ವಿಶ್ವ ಆರೋಗ್ಯ ಸಂಸ್ಥೆ ಹೇಳಿಕೆ
Last Updated 25 ಏಪ್ರಿಲ್ 2020, 11:52 IST
ಅಕ್ಷರ ಗಾತ್ರ

ಜಿನೀವಾ: ಕೊರೊನಾ ವೈರಸ್ (ಕೋವಿಡ್–19) ಸೋಂಕಿನಿಂದ ಒಮ್ಮೆ ಚೇತರಿಸಿಕೊಂಡವರಲ್ಲಿ ಅಭಿವೃದ್ಧಿಯಾಗಿರುವ ಪ್ರತಿರೋಧಕ ಶಕ್ತಿಯಿಂದಾಗಿ ಅವರಿಗೆ ಮತ್ತೊಮ್ಮೆ ರೋಗ ಬಾರದು ಎಂಬುದಕ್ಕೆ ಪುರಾವೆಗಳಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಹೇಳಿದೆ.

ಈ ಕುರಿತು ಶನಿವಾರ ಪ್ರಕಟಣೆ ಬಿಡುಗಡೆ ಮಾಡಿರುವ ಡಬ್ಲ್ಯುಎಚ್‌ಒ, ಕೊರೊನಾದಿಂದ ಚೇತರಿಸಿದವರಿಗೆ ‘ವಿನಾಯಿತಿ ಪಾಸ್‌ಪೋರ್ಟ್‌’ಗಳನ್ನು ಅಥವಾ ‘ಅಪಾಯಮುಕ್ತ ಪ್ರಮಾಣಪತ್ರ’ಗಳನ್ನು ನೀಡುವುದರಿಂದ ಅವರು ಆರೋಗ್ಯ ಸಲಹೆಗಳನ್ನು ನಿರ್ಲಕ್ಷಿಸಬಹುದು. ಇದರಿಂದ ಸೋಂಕು ಹರಡುವಿಕೆ ಹೆಚ್ಚುವ ಸಾಧ್ಯತೆ ಇದೆ ಎಂದು ಹೇಳಿದೆ.

ಕೊರೊನಾದಿಂದ ಗುಣಮುಖರಾದವರಿಗೆ ‘ಆರೋಗ್ಯ ಪಾಸ್‌ಪೋರ್ಟ್‌’ಗಳನ್ನು ನೀಡುವುದಾಗಿ ಕಳೆದ ವಾರ ಚಿಲೆ ಘೋಷಿಸಿತ್ತು. ಚೇತರಿಸಿಕೊಂಡವರಲ್ಲಿ ವೈರಸ್ ನಿರೋಧಕ ಶಕ್ತಿ ಇರುವುದು ಖಚಿತವಾದ ಕೂಡಲೇ ಅವರು ಉದ್ಯೋಗಕ್ಕೆ ಮರು ಸೇರ್ಪಡೆಯಾಗಬಹುದು ಎಂದು ಹೇಳಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT