ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಆರ್ಸೆನಿಕ್ ಆಲ್ಬಂ’ ಕೊರೊನಾಕ್ಕೆ ಮದ್ದಲ್ಲ: ಆಯುಷ್ ಇಲಾಖೆ ಸ್ಷಷ್ಟನೆ

ರೋಗನಿರೋಧಕ ಶಕ್ತಿ ವೃದ್ಧಿಗೆ ಸಹಾಯಕ
Last Updated 18 ಜುಲೈ 2020, 22:13 IST
ಅಕ್ಷರ ಗಾತ್ರ

ಬೆಂಗಳೂರು: ಹೋಮಿಯೋಪಥಿ ಪದ್ಧತಿಯಡಿ ತಯಾರಿಸಿರುವ ‘ಆರ್ಸೆನಿಕ್ ಆಲ್ಬಂ–30’ ಮಾತ್ರೆಗಳು ಕೋವಿಡ್‌ ಗುಣಪಡಿಸಬಹುದಾದ ಔಷಧವಲ್ಲ. ಬದಲಾಗಿ ರೋಗನಿರೋಧಕ ಶಕ್ತಿ ವೃದ್ಧಿಸಲು ಸಹಕಾರಿಯಷ್ಟೇ ಎಂದು ಆಯುಷ್ ಇಲಾಖೆ ಸ್ಪಷ್ಟನೆ ನೀಡಿದೆ.

ಈ ಮಾತ್ರೆಗಳ ಸೇವನೆಯಿಂದ ಕೋವಿಡ್ ನಿವಾರಣೆಯಾಗಲಿದೆ ಎಂಬ ಸಂದೇಶಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು. ಇದರಿಂದಾಗಿ ಮಾತ್ರೆಗಳಿಗೆ ಬೇಡಿಕೆ ಹೆಚ್ಚಾಗಿತ್ತು. ಹೀಗಾಗಿ ಇಲಾಖೆ ಈ ಬಗ್ಗೆ ಸ್ಪಷ್ಟನೆ ನೀಡಿದೆ.

‘ಕೇಂದ್ರ ಆಯುಷ್ ಇಲಾಖೆಯ ಸೂಚನೆ ಅನುಸಾರ ರೋಗನಿರೋಧಕ ಶಕ್ತಿ ವೃದ್ಧಿಗೆ ಮಾತ್ರೆಗಳನ್ನು ನೀಡಲಾಗುತ್ತಿದೆ. ಜ್ವರ, ಶೀತ, ಕೆಮ್ಮು ಇದ್ದವರು ಬೇಗ ಚೇತರಿಸಿಕೊಳ್ಳಲು ಸಹಾಯಕವಾಗಿದೆ. ಇದರಿಂದಲೇ ಕೊರೊನಾ ವಾಸಿಯಾಗುತ್ತದೆ ಎನ್ನುವುದು ಸಾಬೀತಾಗಿಲ್ಲ. ಹಾಗಾಗಿ ಇದು ಕೊರೊನಾ ಔಷಧಿಯಲ್ಲ’ ಎಂದು ತಿಳಿಸಿದೆ.

ರೋಗ ನಿರೋಧಕ ಶಕ್ತಿ ವೃದ್ಧಿಗೆ ಇಲಾಖೆ ನೀಡಿದ ಸಲಹೆಗಳು
*
ಕುಡಿಯಲು ಯಾವಾಗಲೂ ಬಿಸಿನೀರು ಉಪಯೋಗಿಸಬೇಕು
* ಪ್ರತಿದಿನ ಯೋಗಾಸನ, ಪ್ರಾಣಾಯಾಮವನ್ನು ಕನಿಷ್ಠ 30 ನಿಮಿಷ ಮಾಡಬೇಕು
* ಅರಿಸಿನ, ಜೀರಿಗೆ, ಬೆಳ್ಳುಳ್ಳಿ ಮತ್ತು ಧನಿಯಾಗಳನ್ನು ಆಹಾರದಲ್ಲಿ ಬಳಸಬೇಕು
* ಅರಿಸಿನ ಬೆರೆಸಿದ ಹಾಲು ಕುಡಿಯುವುದು ಒಳ್ಳೆಯದು
* ಗಿಡಮೂಲಿಕೆ ಬಳಸಿ ತಯಾರಿಸಿ ಚಹಾವನ್ನು ಕುಡಿಯುವುದು
* ಪುದಿನ ಎಲೆಗಳನ್ನು ಬಿಸಿನೀರಿಗೆ ಹಾಕಿ, ಹಬೆಯನ್ನು ತೆಗೆದುಕೊಳ್ಳಬೇಕು
* ಕೆಮ್ಮು ಅಥವಾ ಗಂಟಲಿನ ಕಿರಿಕಿರಿ ಇದ್ದಲ್ಲಿ ಸಕ್ಕರೆ ಅಥವಾ ಜೇನುತುಪ್ಪದಲ್ಲಿ ಲವಂಗ ಪುಡಿಯನ್ನು ಬೆರೆಸಿ, ದಿನಕ್ಕೆ ಎರಡರಿಂದ ಮೂರುಬಾರಿ ಸೇವಿಸಬೇಕು
* ಎಳ್ಳೆಣ್ಣೆ, ಕೊಬ್ಬರಿ ಎಣ್ಣೆ ಅಥವಾ ತುಪ್ಪವನ್ನು ಮೂಗಿನ ಎರಡೂ ಹೊಳ್ಳೆಗಳಿಗೆ ದಿನಕ್ಕೆ ಎರಡು ಬಾರಿ ಸವರಿಕೊಳ್ಳಬೇಕು
* ಒಂದು ಟೇಬಲ್ ಚಮಚ ಎಳ್ಳೆಣ್ಣೆ ಅಥವಾ ತೆಂಗಿನ ಎಣ್ಣೆಯನ್ನು ಎರಡು-ಮೂರು ನಿಮಿಷ ಬಾಯಿಯಲ್ಲಿಟ್ಟು ಉಗುಳಬೇಕು. ನಂತರ ಬಿಸಿನೀರಿನಿಂದ ಬಾಯಿ ಮುಕ್ಕಳಿಸಬೇಕು. ಈ ವಿಧಾನವನ್ನು ದಿನಕ್ಕೆ ಎರಡು ಬಾರಿ ಮಾಡಬೇಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT