ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ | ಮಹಿಳೆಯರ ಸ್ವಾವಲಂಬಿ ಉದ್ಯೋಗಕ್ಕೆ ‘ಸಖಿ’

ಪ್ರಜಾವಾಣಿ ವಿಶೇಷ ವರದಿ
Last Updated 19 ಜುಲೈ 2020, 19:31 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಕೋವಿಡ್‌–19 ಸಂದರ್ಭದಲ್ಲಿ ಕುಟುಂಬವನ್ನು ಆರ್ಥಿಕ ಸಂಕಷ್ಟದಿಂದ ಪಾರು ಮಾಡುವ ಸಲುವಾಗಿ ಮಹಿಳೆಯರು ಮಾಸ್ಕ್‌ ತಯಾರಿಕೆಗೆ ಮುಂದಾಗಿದ್ದಾರೆ.

ಕಷ್ಟದಲ್ಲಿರುವ ಮಹಿಳೆಯರಿಗೆ ನೆರವಾಗಲು ದೇಶಪಾಂಡೆ ಫೌಂಡೇಷನ್‌ ಮಾಸ್ಕ್‌ ತಯಾರಿಸುವ ಯೋಜನೆ ಹಮ್ಮಿಕೊಂಡಿದೆ. ಹೊಲಿಗೆಯಂತ್ರ ಇರುವ ಕುಟುಂಬಗಳಿಗೆ ಮಾಸ್ಕ್‌ ತಯಾರಿಸುವ ಜವಾಬ್ದಾರಿ ನೀಡಿದೆ. ಆನ್‌ಲೈನ್‌ ಮೂಲಕ ತರಬೇತಿ ನೀಡಲಾಗಿದ್ದು, ಮಾರಾಟದ ಹೊಣೆಯನ್ನು ಫೌಂಡೇಷನ್‌ ನೋಡಿಕೊಳ್ಳುತ್ತಿದೆ. ಸ್ವಾವಲಂಬಿ ಸಖಿ ಪ್ರೊಡ್ಯೂಸರ್‌ ಕಂಪನಿ ಲಿಮಿಟೆಡ್‌ ಸ್ಥಾಪಿಸುವ ಯೋಜನೆ ಕೆಲ ದಿನಗಳಲ್ಲಿ ಆರಂಭವಾಗಲಿದೆ ಎನ್ನುತ್ತಾರೆ ದೇಶಪಾಂಡೆ ಫೌಂಡೇಷನ್‌ನ ಉಪ ವ್ಯವಸ್ಥಾಪಕಿ ರಾಜೇಶ್ವರಿ ಲದ್ದಿ.

ಮಾಸ್ಕ್‌ ತಯಾರಿಕೆಯಲ್ಲಿ 70 ಮಹಿಳೆಯರು ಸಕ್ರಿಯರಾಗಿದ್ದು, ಈಗಾಗಲೇ 70 ಸಾವಿರ ಮಾಸ್ಕ್‌ಗಳನ್ನು ಮಾರಾಟ ಮಾಡಿದ್ದು, ವಿಶ್ವಸಂಸ್ಥೆ ನೀಡಿರುವ ನಿಯಮಗಳಂತೆ ಸೇಫ್‌ 3ಪಿ ಮಾಸ್ಕ್‌ಗಳನ್ನು ತಯಾರಿಸಲಾಗುತ್ತಿದೆ ಎಂದು ರಾಜೇಶ್ವರಿ ಹೇಳುತ್ತಾರೆ. ಬೆಂಗಳೂರಿನ ಯೂತ್‌ ಫಾರ್‌ ಸೇವಾ ಸಂಸ್ಥೆಯು ಸೇಫ್‌ 3ಪಿ ಮಾಸ್ಕ್‌ಗಳನ್ನು ಖರೀದಿಸಿ ಉದ್ಯಮಕ್ಕೆ ಸಹಕರಿಸಿದೆ.

ತಯಾರಿ ಹೀಗೆ

ಖಾದಿ, ಕಾಟನ್‌ ಬಟ್ಟೆಯನ್ನು ಸೋಡಿಯಂ ಹೈಪೊಕ್ಲೋರೈಟ್‌ ಬಳಸಿ ತೊಳೆದು 8 ತಾಸು ಒಣಗಿಸಿ, ಇಸ್ತ್ರಿ ಮಾಡಿದ ನಂತರ ಬಳಸಲಾಗುತ್ತದೆ. ಮಾಸ್ಕ್‌ ಹೊಲಿಯುವಾಗ ಮಹಿಳೆಯರು ಗ್ಲೌಸ್‌, ಮಾಸ್ಕ್‌, ಸ್ಯಾನಿಟೈಸರ್‌ ಬಳಸುತ್ತಾರೆ. ಮಾಸ್ಕ್‌ಗಳನ್ನು ಸಂಸ್ಕರಣೆಗೆ ಒಳಪಡಿಸಿ ಪ್ಯಾಕೆಟ್‌ ಮಾಡಲಾಗುತ್ತದೆ. ಇದನ್ನು ಮರುಬಳಕೆ ಮಾಡಬಹುದು ಎನ್ನುತ್ತಾರೆ ಲೈಫ್‌ಟ್ರಾನ್‌ ದೇಶಪಾಂಡೆ ಸ್ಟಾರ್ಟ್‌ಅಪ್‌ ಮುಖ್ಯಸ್ಥ ಡಾ. ಕಿರಣ್ ಕಂಠಿ.

***

ಲಾಕ್‌ಡೌನ್‌ ವೇಳೆ ಕೆಲಸ ಇಲ್ಲದಾಗ ನಮಗೆ ಸ್ವಾವಲಂಬಿ ಸಖಿ ಕಂಪನಿ ಆರ್ಥಿಕ ಭದ್ರತೆ ನೀಡುವುದರ ಜತೆಗೆ ಕಷ್ಟದ ಸ್ಥಿತಿಯಲ್ಲಿದ್ದ ಕುಟುಂಬಕ್ಕೆ ನೆರವಾಗಿದೆ

– ವಿಜಯ ಐ ಮುದಿಗೌಡರ, ಮಾಸ್ಕ್‌ ತಯಾರಿಕೆಯಲ್ಲಿ ತೊಡಗಿಸಿಕೊಂಡವರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT