ಭಾನುವಾರ, ಜೂನ್ 20, 2021
29 °C

ಆಗಸ್ಟ್‌ 3ರಂದು ಮಾನವ ಹಕ್ಕು ಆಯೋಗಕ್ಕೆ ದಾಖಲೆ ನೀಡುತ್ತೇನೆ: ಎಚ್‌.ಕೆ. ಪಾಟೀಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಬೆಂಗಳೂರು: ‘ಕೊರೊನಾ ನಿಯಂತ್ರಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಸೋಂಕು ತಡೆಯಲು ಸೂಕ್ತ ಕ್ರಮ ತೆಗೆದುಕೊಳ್ಳುತ್ತಿಲ್ಲ. ಹೀಗಾಗಿ, ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿದ್ದೇನೆ. ಸರ್ಕಾರದ ವಿರುದ್ಧ ಆಯೋಗ ದೂರು ದಾಖಲಿಸಿಕೊಂಡಿದೆ’ ಎಂದು ಕಾಂಗ್ರೆಸ್‌ ಶಾಸಕ ಎಚ್.ಕೆ. ಪಾಟೀಲ ಹೇಳಿದರು.

ಮಾಧ್ಯಮ ಪ್ರತಿನಿಧಿಗಳ ಜೊತೆ ಶನಿವಾರ ಮಾತನಾಡಿದ ಅವರು, ‘ಆಂಬುಲೆನ್ಸ್‌ ಇಲ್ಲದೆ ಸೋಂಕಿತರು ಎರಡು ದಿನ ನರಳಾಡಿ ಸಾವಿಗೀಡಾದ ಘಟನೆಗಳು ನಡೆದಿವೆ. ಅಂತ್ಯಸಂಸ್ಕಾರದಲ್ಲೂ ಸರಿಯಾಗಿ ನಡೆದುಕೊಂಡಿಲ್ಲ. ಶವಗಳನ್ನು ಮನಸ್ಸಿಗೆ ಬಂದಂತೆ ಎಸೆದಿದ್ದಾರೆ. ಇದೆಲ್ಲವೂ ಮಾನವ ಹಕ್ಕುಗಳ ಉಲ್ಲಂಘನೆ. ಹೀಗಾಗಿ, ಆಯೋಗ ದೂರು ದಾಖಲು ಮಾಡಿಕೊಂಡಿದೆ’ ಎಂದರು.

‘ಆಗಸ್ಟ್‌ 3ರಂದು ಹಾಜರಾಗಲು ನನಗೆ ಆಯೋಗ ತಿಳಿಸಿದೆ. ಅಂದು ಆಯೋಗದ ಎದುರು ಹಾಜರಾಗಿ ನಮ್ಮಲ್ಲಿರುವ ದಾಖಲೆಗಳನ್ನು ಸಲ್ಲಿಸುತ್ತೇನೆ. ಸಂಪೂರ್ಣ ವಿವರಗಳನ್ನೂ ಆಯೋಗಕ್ಕೆ ನೀಡುತ್ತೇನೆ’ ಎಂದರು

ಕಾಂಗ್ರೆಸ್ ನಾಯಕರಿಗೆ ಬಿಜೆಪಿ ಲೀಗಲ್‌ ನೋಟಿಸ್ ಕಳುಹಿಸಿದ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಕಾಂಗ್ರೆಸ್ ನಾಯಕರನ್ನು ಕಟ್ಟಿ ಹಾಕುವಂಥ ಪ್ರಮೇಯವೇ ಇಲ್ಲ. ನೋಟಿಸ್ ಕೊಟ್ಟು ಅಂಜಿಸುವ ಪ್ರಯತ್ನ ನಡೆಯಲ್ಲ. ಅಂಥ ಪ್ರಯತ್ನಕ್ಕೆ ನಾವು ಹೆದರುವುದಿಲ್ಲ’ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು