ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪತ್ನಿ, ಪೋಷಕರಿಂದ ಪ್ರತ್ಯೇಕವಾಗಿ ವೀರ ಯೋಧ ಎಚ್‌.ಗುರು ಹುಟ್ಟುಹಬ್ಬ ಆಚರಣೆ

Last Updated 21 ಜುಲೈ 2020, 11:09 IST
ಅಕ್ಷರ ಗಾತ್ರ

ಮಂಡ್ಯ: ಪುಲ್ವಾಮಾ ದಾಳಿಯ ಹುತಾತ್ಮ ಯೋಧ ಎಚ್‌.ಗುರು ಅವರ ಜನ್ಮದಿನವನ್ನು ಸೋಮವಾರ ಗುರು ಕುಟುಂಬ ಸದಸ್ಯರು ಹಾಗೂ ಅವರ ಪತ್ನಿ ಕಲಾವತಿ ಪ್ರತ್ಯೇಕವಾಗಿ ಆಚರಣೆ ಮಾಡಿದರು.

ಗುರು ಸಹೋದರ ಮಧು ಹಾಗೂ ಸಂಬಂಧಿಕರು ಮಮತೆಯ ಮಡಿಲು ನಿತ್ಯ ದಾಸೋಹ ಸದಸ್ಯರೊಂ ದಿಗೆ ನಗರದ ಜಿಲ್ಲಾಸ್ಪತ್ರೆಯ ಹೊರ ರೋಗಿಗಳಿಗೆ ಊಟ ಹಾಗೂ ಗಂಜಿ ವಿತರಣೆ ಮಾಡಿದರು. ರಕ್ತದಾನ ಮಾಡಿ ದವರಿಗೆ ಸಸಿ ವಿತರಣೆ ಮಾಡಿದರು.

ಮಮತೆಯ ಮಡಿಲು ಅಧ್ಯಕ್ಷ ಮಂಗಲ ಯೋಗೀಶ್ ಮಾತನಾಡಿ, ‘ದೇಶಕ್ಕೆ ಪ್ರಾಣಾರ್ಪಣೆ ಮಾಡಿದ ಎಚ್‌.ಗುರು ಅವರ ಸೇವೆ ಸ್ಮರಣೀಯವಾದುದು. ಅವರು ಇಂದು ನಮ್ಮ ಜೊತೆ ಇಲ್ಲದಿದ್ದರೂ ಅವರು ಒಬ್ಬ ಯೋಧನಾಗಿ ಸಲ್ಲಿಸಿರುವ ಸೇವೆ ಯುವಜನರಿಗೆ ಸ್ಫೂರ್ತಿಯಾಗಿದೆ. ಮಂಡ್ಯದ ಯುವಕರು ಸೇನೆಗೆ ಸೇರುವುದು ಬಹಳ ಕಡಿಮೆ. ಮುಂದಿನ ದಿನಗಳಲ್ಲಿ ಸೇನೆಗೆ ಸೇರುವವರ ಸಂಖ್ಯೆ ಹೆಚ್ಚಳವಾಗಬೇಕು’ ಎಂದರು. ಎಂ.ರಾಜೇಶ್, ಸ್ವಾಮಿ, ಅರುಣ್, ಕೆ.ಪಿ. ಅರುಣಕುಮಾರಿ, ರವಿ ಮಂಗಲ, ಬಸವರಾಜು ಇದ್ದರು.

ಕಿಟ್ ವಿತರಣೆ

ಭಾರತೀನಗರ: ಎಚ್. ಗುರು ಜನ್ಮದಿನದ ಅಂಗವಾಗಿ ಗುರು ಪತ್ನಿ ಕಲಾವತಿ ಅವರು ಆಶಾ ಕಾರ್ಯಕರ್ತೆಯರಿಗೆ ಆಹಾರ ಸಾಮಗ್ರಿಗಳ ಕಿಟ್ ವಿತರಿಸಿದರು.

ಆಶಾ ಕಾರ್ಯಕರ್ತೆ ಗೌರಮ್ಮ ಅವರು ಮಾತನಾಡಿ, ಆಶಾ ಕಾರ್ಯಕರ್ತೆಯರನ್ನು ಗುರುತಿಸಿ ಆಹಾರ ಕಿಟ್ ನೀಡಿರುವ ಯೋಧ ಗುರುವಿನ ಪತ್ನಿ ಕಲಾವತಿ ಅವರಿಗೆ ಅಭಿನಂದನೆ ಸಲ್ಲಿಸಿದರು. ಹುತಾತ್ಮ ಯೋಧ ಎಚ್.ಗುರು ಪತ್ನಿ ಕಲಾವತಿ ಅವರು ಸಮಾಧಿಗೆ ಪೂಜೆ ಸಲ್ಲಿಸಿದರು. ಪಿಎಸ್‌ಐ ಶೇಷಾದ್ರಿ ಕುಮಾರ್, ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಧಿಕಾರಿ ಡಾ. ಸಂದೀಪ್ ಕೊರೆ, ಡಾ. ಮೋಹನ್ ಬಾಬು, ಆರೋಗ್ಯಾಧಿಕಾರಿ ಕೃಷ್ಣೇಗೌಡ, ಪಿಡಿಒ ಸುಧಾ, ಅರವಿಂದ್, ಜಯಮ್ಮ, ಶಿವಣ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT