ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದ ಅತ್ಯಂತ ಹಿರಿಯ, 101 ವರ್ಷದ ಕೋವಿಡ್‌ ರೋಗಿ ಮಹಾಮಾರಿಗೆ ಬಲಿ

Last Updated 14 ಜೂನ್ 2020, 13:16 IST
ಅಕ್ಷರ ಗಾತ್ರ

ಇಂದೋರ್: ದೇಶದ ಅತ್ಯಂತ ಹಿರಿಯ ಕೋವಿಡ್-19 ರೋಗಿಗಳಲ್ಲಿ ಒಬ್ಬರಾಗಿದ್ದ 101 ವರ್ಷದ ವ್ಯಕ್ತಿ ಮಧ್ಯಪ್ರದೇಶದ ಇಂದೋರ್ ನಗರದ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ.

ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ವ್ಯಕ್ತಿಯನ್ನು ಗುರುವಾರ ಶ್ರೀ ಅರಬಿಂದೋ ವೈದ್ಯಕೀಯ ವಿಜ್ಞಾನ ಸಂಸ್ಥೆಯ ತೀವ್ರ ನಿಗಾ ಘಟಕಕ್ಕೆ ದಾಖಲಿಸಲಾಗಿತ್ತು. ಅವರ ಸ್ಥಿತಿ ಗಂಭೀರವಾಗಿದ್ದರಿಂದಾಗಿ ಕೃತಕ ಉಸಿರಾಟ ವ್ಯವಸ್ಥೆ ಮಾಡಿ ಕಷ್ಟಪಟ್ಟು ಪ್ರಯತ್ನಿಸಿದ್ದೆವು. ಆದರೆ ಅವರನ್ನು ಉಳಿಸಲು ಸಾಧ್ಯವಾಗಲಿಲ್ಲ. ಅವರು ಶನಿವಾರ ನಿಧನರಾದರು ಎಂದು ಆಸ್ಪತ್ರೆಯ ಎದೆ ರೋಗ ವಿಭಾಗದ ಮುಖ್ಯಸ್ಥ ಡಾ. ರವಿ ದೋಸಿ ತಿಳಿಸಿದ್ದಾರೆ.

ಕೊರೊನಾ ವೈರಸ್‌ನಿಂದ ಉಂಟಾಗುವ ನ್ಯುಮೋನಿಯಾವನ್ನು ಹೊರತುಪಡಿಸಿ ಅವರು ಮೂತ್ರಪಿಂಡ ಮತ್ತು ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿದ್ದರು ಎಂದು ಅವರು ಹೇಳಿದ್ದಾರೆ.

ಈ ವ್ಯಕ್ತಿಯು ಕಳೆದ ಹಲವು ದಿನಗಳಿಂದ ಛತ್ರಿಬಾಗ್‌ ಪ್ರದೇಶದಲ್ಲಿರುವ ತನ್ನ ನಿವಾಸದಿಂದ ಹೊರಗೆ ಹೋಗಿರಲಿಲ್ಲ. ಅವರಿಗೆ ಬಹುಶಃ ಕುಟುಂಬ ಸದಸ್ಯರಿಂದ ಸೋಂಕು ತಗುಲಿರಬಹುದು ಎಂದು ಡಾ. ದೋಸಿ ಹೇಳಿದ್ದಾರೆ.

ಶನಿವಾರದಿಂದೀಚೆಗೆ ಇಂದೋರ್‌ನಲ್ಲಿ 170 ಜನರು ಮೃತಪಟ್ಟಿದ್ದು, 4,063 ಪ್ರಕರಣಗಳು ವರದಿಯಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT