ಭಾನುವಾರ, ಡಿಸೆಂಬರ್ 8, 2019
19 °C

ಕಾಶ್ಮೀರ: ಕಣಿವೆಗೆ ಉರುಳಿದ ಬಸ್‌; 11 ಮಂದಿ ಪ್ರಯಾಣಿಕರ ಸಾವು

ಏಜೆನ್ಸಿಸ್ Updated:

ಅಕ್ಷರ ಗಾತ್ರ : | |

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪೂಂಚ್‌ ಜಿಲ್ಲೆಯಲ್ಲಿ ಬಸ್‌ವೊಂದು ರಸ್ತೆ ಬದಿಯಲ್ಲಿ ಜಾರಿ ಕಮರಿಗೆ ಉರುಳಿದೆ. ಈ ಅಪಘಾತದಲ್ಲಿ ಕನಿಷ್ಠ 11 ಮಂದಿ ಸಾವಿಗೀಡಾಗಿದ್ದು, ಹಲವು ಪ್ರಯಾಣಿಕರು ಗಾಯಗೊಂಡಿದ್ದಾರೆ. 

ಲೊರಾನ್‌ನಿಂದ ಪೂಂಚ್‌ ಕಡೆಗೆ ಸಾಗುತ್ತಿದ್ದ ಜೆಕೆ02ಡಬ್ಲ್ಯು 0445 ಬಸ್‌ ಪ್ಲೆರಾ ಬಳಿ ದುರಂತಕ್ಕೆ ಈಡಾಗಿದೆ. ಶ್ರೀನಗರದಿಂದ ಪೂಂಚ್‌ 175 ಕಿ.ಮೀ. ದೂರದಲ್ಲಿದೆ. ಪೂಂಚ್‌ನಿಂದ ಪ್ಲೆರಾ 30 ಕಿ.ಮೀ. ಅಂತರದಲ್ಲಿದೆ. 

ಕಮರಿಗೆ ಜಾರಿರುವ ಬಸ್‌ ಕೆಳಗಿನ ನದಿ ತೀರಕ್ಕೆ ಬಂದು ಬಿದ್ದಿದ್ದು, ಬಹುತೇಕ ನಜ್ಜುಗುಜ್ಜಾಗಿದೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಮಂಡಿ ಉಪ–ವಿಭಾಗದ ಆಸ್ಪತ್ರೆಗೆ ಸಾಗಿಸಲಾಗಿದೆ. ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆ ಇರುವುದಾಗಿ ಹಿಂದುಸ್ತಾನ್‌ ಟೈಮ್ಸ್‌ ವರದಿ ಮಾಡಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು