’ಪಾಕ್‌ ಪೈಲಟ್‌ಗಳಿಗೆ ರಫೇಲ್‌ ವಿಮಾನ ಚಾಲನಾ ತರಬೇತಿ ನೀಡಿಲ್ಲ‘

ಗುರುವಾರ , ಏಪ್ರಿಲ್ 25, 2019
22 °C

’ಪಾಕ್‌ ಪೈಲಟ್‌ಗಳಿಗೆ ರಫೇಲ್‌ ವಿಮಾನ ಚಾಲನಾ ತರಬೇತಿ ನೀಡಿಲ್ಲ‘

Published:
Updated:

ನವದೆಹಲಿ: ರಫೇಲ್‌ ಯುದ್ಧ ವಿಮಾನ ಚಾಲನೆ ಕುರಿತು ಪಾಕಿಸ್ತಾನದ ಪೈಲಟ್‌ಗಳಿಗೆ ಫ್ರಾನ್ಸ್‌ನಲ್ಲಿ ಯಾವುದೇ ರೀತಿಯ ತರಬೇತಿ ನೀಡಿಲ್ಲ. ಈ ಕುರಿತು ಹರಡಿರುವ ಸುದ್ದಿ ಸತ್ಯಕ್ಕೆ ದೂರವಾದುದು ಎಂದು ಫ್ರಾನ್ಸ್‌ ರಾಯಭಾರಿ ಅಲೆಕ್ಸಾಂಡರ್‌ ಝೀಗ್ಲರ್‌ ಗುರುವಾರ ಹೇಳಿದ್ದಾರೆ. 

ಕತಾರ್‌ ವಾಯುಪಡೆಗೆ ಒದಗಿಸಲಾಗಿದ್ದ ರಫೇಲ್‌ ಯುದ್ಧ ವಿಮಾನಗಳನ್ನು ಪಾಕಿಸ್ತಾನದ ಪೈಲಟ್‌ಗಳಿಗೆ ತರಬೇತಿ ನೀಡಲು ಬಳಸಲಾಗಿತ್ತು ಎಂದು ಅಮೆರಿಕದ ವಾಯುಯಾನ ಇಂಡಸ್ಟ್ರಿಯ ವೆಬ್‌ಸೈಟ್‌ ainonline.com ನಲ್ಲಿ ವರದಿ ಪ್ರಕಟವಾಗಿತ್ತು. 2017ರ ನವೆಂಬರ್‌ನಲ್ಲಿ ಈ ತರಬೇತಿ ನೀಡಲಾಗಿತ್ತು ಎಂದು ಅದು ಹೇಳಿತ್ತು. 

’ಈ ಸುದ್ದಿ ಶುದ್ಧ ಸುಳ್ಳು‘ ಎಂದು ಝೀಗ್ಲರ್‌ ಟ್ವೀಟ್‌ ಮಾಡಿದ್ದಾರೆ. ಫ್ರಾನ್ಸ್‌ನಲ್ಲಿ ಪಾಕಿಸ್ತಾನದ ಪೈಲಟ್‌ಗಳಿಗೆ ಯಾವತ್ತೂ  ತರಬೇತಿ ನೀಡಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. 

ರಫೇಲ್‌ ಯುದ್ಧವಿಮಾನ ಖರೀದಿ ಕುರಿತು ವಿವಾದ ಉಂಟಾಗಿರುವ ಈ ಸಂದರ್ಭದಲ್ಲಿ ಅಮೆರಿಕ ವೆಬ್‌ಸೈಟ್‌ ಪ್ರಕಟಿಸಿದ ಈ ಸುದ್ದಿ ಚರ್ಚೆಗೆ ಕಾರಣವಾಗಿತ್ತು. 

₹58 ಸಾವಿರ ಕೋಟಿ ವೆಚ್ಚದಲ್ಲಿ ಭಾರತವು ಫ್ರಾನ್ಸ್‌ನಿಂದ 36 ರಫೇಲ್‌ ಯುದ್ಧವಿಮಾನಗಳ ಖರೀದಿ ಒಪ್ಪಂದ ಮಾಡಿಕೊಂಡಿದೆ. ಇದರಲ್ಲಿ ಅವ್ಯವಹಾರ ನಡೆದಿದೆ ಎಂದು ಕಾಂಗ್ರೆಸ್‌ ಆರೋಪಿಸಿದ್ದರೆ, ಈ ಆರೋಪವನ್ನು ಸರ್ಕಾರ ಸ್ಪಷ್ಟವಾಗಿ ತಳ್ಳಿಹಾಕಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !