ಶನಿವಾರ, ಜೂನ್ 19, 2021
23 °C

ಜೈ ಶ್ರೀರಾಮ್​​ ಎನ್ನದ ಮುಸ್ಲಿಂ ಯುವಕನಿಗೆ ಬೆಂಕಿ ಹಚ್ಚಿದ ನಾಲ್ವರು ದುಷ್ಕರ್ಮಿಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉತ್ತರಪ್ರದೇಶ: ಜೈ ಶ್ರೀರಾಮ್ ಎಂದು ಘೋಷಣೆ ಕೂಗಲು ನಿರಾಕರಿಸಿದ ಇಲ್ಲಿನ ಚಂದೌಲಿ ಜಿಲ್ಲೆಯ 15 ವರ್ಷದ ಮುಸ್ಲಿಂ ಯುವಕನಿಗೆ, ನಾಲ್ವರು ಬೆಂಕಿ ಹಚ್ಚಿದ್ದಾರೆ.

ಯುವಕನನ್ನು ಇಲ್ಲಿನ ಕಾಶಿ ಕಬೀರ್‌ ಚೌರಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಶೇ 60ರಷ್ಟು ದೇಹ ಸುಟ್ಟು ಹೋಗಿದ್ದು, ಆತನ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ತಿಳಿಸಿದರು.  

ಶ್ರೀ ರಾಮ್ ಎಂದು ಘೋಷಣೆ ಕೂಗದ ಕಾರಣಕ್ಕೆ ಬೆಂಕಿ ಹಚ್ಚಲಾಗಿದೆ ಎಂದು ಆ ಯುವಕ ಪೊಲೀಸರಿಗೆ ಹೇಳಿಕೆ ಕೊಟ್ಟಿದ್ದು, ಆಸ್ಪತ್ರೆಯ ಸಿ.ಸಿ.ಟಿ.ವಿ. ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅದಾಗ್ಯೂ ಆತನ ಹೇಳಿಕೆಗಳು ವ್ಯತಿರಿಕ್ತವಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. 

‘ಸೇತುವೆ ಮೇಲೆ ನಡೆದುಕೊಂಡು ಬರುತ್ತಿರುವಾಗ ನಾಲ್ವರು ನನ್ನನ್ನು ಅಪಹರಿಸಿದರು. ಇಬ್ಬರು ನನ್ನ ಕೈಗಳನ್ನು ಕಟ್ಟಿ ಹಾಕಿದರು. ಮೂರನೆಯ ವ್ಯಕ್ತಿ ನನ್ನ ಮೇಲೆ ಸೀಮೆಎಣ್ಣೆ ಸುರಿದು, ಬೆಂಕಿ ಹಚ್ಚಿ ಅಲ್ಲಿಂದ ಪರಾರಿಯಾದರು’ ಎಂದು ಯುವಕ ‘ಆಜ್‌ ತಕ್‌’ ವಾಹಿನಿಗೆ ತಿಳಿಸಿದ್ದಾನೆ.

‘ಯುವಕ ಮನೆಗೆ ತಲುಪುವಷ್ಟರಲ್ಲಿ ಆತನ ದೇಹದ ಭಾಗಗಳು ಸಾಕಷ್ಟು ಸುಟ್ಟು ಹೋಗಿದ್ದವು’ ಎಂದು ಪೊಲೀಸರು ತಿಳಿಸಿದರು. ಈ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಇದನ್ನು ಅನುಮಾನಾಸ್ಪದ ಪ್ರಕರಣವಾಗಿ ನೋಡುತ್ತಿದ್ದಾರೆ.

ಇವನ್ನೂ ಓದಿ

ಜೈ ಶ್ರೀರಾಮ್' ಅಲ್ಪಸಂಖ್ಯಾತರಲ್ಲಿ ಭಯ ಹುಟ್ಟಿಸಿದೆ: ಮೋದಿಗೆ ಪತ್ರ

ಜೈ ಶ್ರೀರಾಮ್ ಘೋಷಣೆ ಕೂಗುವಂತೆ ಮುಸ್ಲಿಂ ಶಾಸಕನಿಗೆ ಒತ್ತಾಯಿಸಿದ ಜಾರ್ಖಂಡ್ ಸಚಿವ

'ಜೈ ಶ್ರೀರಾಮ್ ಎಂದು ಹೇಳದವರನ್ನು ಸ್ಮಶಾನಕ್ಕೆ ಕಳಿಸಿ' ವೈರಲ್ ಹಾಡಿನ ಗಾಯಕ ಬಂಧನ

ದ್ವೇಷ ಕೃತ್ಯ ಪ್ರಕರಣ ಸಂತ್ರಸ್ತರಲ್ಲಿ ಬಹುಪಾಲು ಅಲ್ಪ ಸಂಖ್ಯಾತರು ಮತ್ತು ದಲಿತರು!

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು