ಬುಧವಾರ, ಫೆಬ್ರವರಿ 26, 2020
19 °C

'ಜೈ ಶ್ರೀರಾಮ್ ಎಂದು ಹೇಳದವರನ್ನು ಸ್ಮಶಾನಕ್ಕೆ ಕಳಿಸಿ' ವೈರಲ್ ಹಾಡಿನ ಗಾಯಕ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಖನೌ: ಜೊ ನ ಬೋಲೆ ಜೈ ಶ್ರೀರಾಮ್, ಭೇಜ್ ದೊ ಉಸ್‌ಕೊ ಕಬರಿಸ್ತಾನ್ ( ಜೈ ಶ್ರೀರಾಮ್ ಎಂದು ಹೇಳದವರನ್ನು ಸ್ಮಶಾನಕ್ಕೆ ಕಳಿಸಿ) ಎಂಬ ಹಾಡಿನ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು.

ಈ ಹಾಡಿನ ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದು, ಈ ಹಾಡು ಯೂಟ್ಯೂಬ್‌ನಲ್ಲಿ  ಅಪ್‌ಲೋಡ್ ಮಾಡಿದವರ  ವಿರುದ್ಧ ಕ್ರಮ ತೆಗೆದುಕೊಳ್ಳಿ ಎಂದು ಪೊಲೀಸರಿಗೆ ಒತ್ತಾಯಿಸಿದ್ದರು.

ಆ ಹಾಡಿನ ಬಗ್ಗೆ ಕ್ರಮ ಕೈಗೊಂಡ ಲಖನೌ ಅಪರಾಧ ದಳ ಮತ್ತು ಸೋಷ್ಯಲ್ ಮೀಡಿಯಾ ಮಾನಿಟರಿಂಗ್ ಸೆಲ್ ಅಧಿಕಾರಿಗಳು ಯೂಟ್ಯೂಬ್‌ನಲ್ಲಿ ಈ ರೀತಿಯ ದ್ವೇಷ ಬಿತ್ತುವ ಹಾಡು ಅಪ್‌ಲೋಡ್ ಮಾಡಿದವರನ್ನು ಶುಕ್ರವಾರ ಬಂಧಿಸಿರುವುದಾಗಿ ಲಖನೌ ಎಸ್‌ಎಸ್‌ಪಿ ಕಲಾನಿಧಿ ನೈತಾನಿ ಹೇಳಿದ್ದಾರೆ.

 ಹಾಡಿನ ಗಾಯಕ ವರುಣ್ ಉಪಾಧ್ಯಾಯ್ ಮತ್ತು ಇತರ ಮೂವರು ವ್ಯಕ್ತಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿರುವುದಾಗಿ ಎಎನ್ಐ ಸುದ್ದಿಸಂಸ್ಥೆ ಟ್ವೀಟ್ ಮಾಡಿದೆ. 

ಇದನ್ನೂ ಓದಿ: 'ಜೈ ಶ್ರೀರಾಮ್ ಎಂದು ಹೇಳದವರನ್ನು ಸ್ಮಶಾನಕ್ಕೆ ಕಳಿಸಿ' ಹಾಡಿನ ವಿಡಿಯೊ ವೈರಲ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು