ಕಾಶ್ಮೀರದಲ್ಲಿ ಎನ್‍ಕೌಂಟರ್: ಇಬ್ಬರು ಉಗ್ರರು ಬಲಿ

7

ಕಾಶ್ಮೀರದಲ್ಲಿ ಎನ್‍ಕೌಂಟರ್: ಇಬ್ಬರು ಉಗ್ರರು ಬಲಿ

Published:
Updated:

ಶ್ರೀನಗರ : ದಕ್ಷಿಣ ಕಾಶ್ಮೀರದ ಕುಲ್ಗಾಂ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಭಾನುವಾರ ನಡೆಸಿದ ಎನ್‌ಕೌಂಟರ್‌ಗೆ ಲಷ್ಕರ್‌ ಎ ತಯಬಾ ವಿಭಾಗೀಯ ಕಮಾಂಡರ್‌ ಶಕೂರ್‌ ದಾರ್‌ ಸೇರಿ ಇಬ್ಬರು ಉಗ್ರರು ಬಲಿಯಾಗಿದ್ದಾರೆ. ಇನ್ನೊಬ್ಬ ಶರಣಾಗಿದ್ದಾನೆ.

ಹತ್ಯೆಗೀಡಾದ ಇನ್ನೊಬ್ಬ ಉಗ್ರ ಪಾಕಿಸ್ತಾನ ಪ್ರಜೆ ಹೈದರ್‌ ಎಂದು ಪೊಲೀಸರು ತಿಳಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರ ಪೊಲೀಸರು, ಸೇನೆ ಹಾಗೂ ಸಿಆರ್‌ಪಿಎಫ್‌ ಯೋಧರು ಜಂಟಿಯಾಗಿ ಕಾರ್ಯಾಚರಣೆ ನಡೆಸಿದ್ದಾರೆ.

‘ಕುಲ್ಗಾಂನ ಚೆದರ್‌ ಬನ್‌ ಪ್ರದೇಶದ ಮನೆಯೊಂದರಲ್ಲಿ ಉಗ್ರರು ಅವಿತಿರುವ ಮಾಹಿತಿ ಪಡೆದ ಭದ್ರತಾ ಪಡೆಗಳು ಮನೆಯನ್ನು ಸುತ್ತುವರಿದಾಗ ಗುಂಡಿನ ಚಕಮಕಿ ನಡೆದಿದೆ ಈ ವೇಳೆ ಉಗ್ರರು ಹತರಾಗಿದ್ದಾರೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಶರಣಾಗಿರುವ ಉಗ್ರ ಇತ್ತೀಚೆಗಷ್ಟೆ ಭಯೋತ್ಪಾದಕ ಸಂಘಟನೆಗೆ ಸೇರಿದ್ದ’ ಎಂದು  ಐಜಿಪಿ ಸ್ವಯಂಪ್ರಕಾಶ್‌ ಪನಿ ಹೇಳಿದ್ದಾರೆ.

‘ಹತ್ಯೆಗಿಡಾಗಿರುವ ಕಮಾಂಡರ್‌ ಶಕೂರ್‌ ದಾರ್‌ ಕುಲ್ಗಾಂನ ಸೊಪತ್‌ ಟೆಂಗ್‌ಪೋರಾ ನಿವಾಸಿಯಾಗಿದ್ದು, ಈತನ ವಿರುದ್ಧ ದಕ್ಷಿಣ ಕಾಶ್ಮೀರದ ಹಲವು ಪೊಲೀಸ್‌ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ’ ಎಂದಿದ್ದಾರೆ.

ಘಟನಾ ಸ್ಥಳದಿಂದ ಭಾರೀ ಪ್ರಮಾಣದ ಮದ್ದುಗುಂಡುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
 

ಬರಹ ಇಷ್ಟವಾಯಿತೆ?

 • 9

  Happy
 • 0

  Amused
 • 0

  Sad
 • 0

  Frustrated
 • 3

  Angry

Comments:

0 comments

Write the first review for this !