ಸೋಮವಾರ, ಆಗಸ್ಟ್ 19, 2019
23 °C

ಎನ್‌ಕೌಂಟರ್‌ಗೆ ಮೂವರು ಉಗ್ರರು ಬಲಿ

Published:
Updated:

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಹಾಗೂ ಶೋಪಿಯಾನ್‌ ಜಿಲ್ಲೆಗಳಲ್ಲಿ ನಡೆದ ಪ್ರತ್ಯೇಕ ಎನ್‌ಕೌಂಟರ್‌ಗಳಲ್ಲಿ ಭದ್ರತಾ ಪಡೆಗಳು ಮೂವರು ಉಗ್ರರನ್ನು ಹೊಡೆದುರುಳಿಸಿವೆ.

ಉಗ್ರರು ಅಡಗಿದ್ದಾರೆ ಎಂಬ ಅಧಿಕೃತ ಮಾಹಿತಿ ಮೇರೆಗೆ ಶನಿವಾರ ಕಾರ್ಯಾಚರಣೆ ನಡೆಸಿದ ಭದ್ರತಾ ಪಡೆ ಜೈಷ್‌ ಎ ಮೊಹಮ್ಮದ್‌ (ಜೆಇಎಂ) ಸಂಘಟನೆಯ ಇಬ್ಬರು ಉಗ್ರರನ್ನು ಬಾರಾಮುಲ್ಲಾದ ಸಪೋರ್‌ ಪಟ್ಟಣದಲ್ಲಿ ಹೊಡೆದುರುಳಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶೋಪಿಯಾನ್‌ ಜಿಲ್ಲೆಯಲ್ಲಿ ನಡೆದ ಮತ್ತೊಂದು ಎನ್‌ಕೌಂಟರ್‌ನಲ್ಲಿ ಜೆಇಎಂ ಉಗ್ರ ಮಂಜೂರ್‌ ಭಟ್‌ ಹತನಾಗಿದ್ದಾನೆ. ಶುಕ್ರವಾರ ಸಹ ಜೆಇಎಂ ಉಗ್ರ ಝೀನತ್‌ ಉಲ್‌ ಇಸ್ಲಾಂ ನಾಯ್ಕೂ ಎಂಬಾತನನ್ನು ಭದ್ರತಾ ಪಡೆಗಳು ಹೊಡೆದುರುಳಿಸಿದ್ದವು. ಈ ಇಬ್ಬರು ಉಗ್ರರು ಅನೇಕ ಭಯೋತ್ಪಾದಕ ದಾಳಿಯಲ್ಲಿ ಭಾಗಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

Post Comments (+)