ಪಂಚಲೋಹ ವಿಗ್ರಹ ಕಳವು: ಮೂವರ ಸೆರೆ

7

ಪಂಚಲೋಹ ವಿಗ್ರಹ ಕಳವು: ಮೂವರ ಸೆರೆ

Published:
Updated:

ಹೈದರಾಬಾದ್‌: ತೆಲಂಗಾಣದ ಮಹಬೂಬಾಬಾದ್‌ ಜಿಲ್ಲೆಯ ದೇವಾಲಯದಿಂದ 12 ಪುರಾತನ ಪಂಚಲೋಹ ವಿಗ್ರಹಗಳನ್ನು ಕಳವುಗೈದ ಆರೋಪದಲ್ಲಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ಎಲ್‌. ರಾಮ್‌, ಕೆ.ಸಂತೋಷ್‌ ಮತ್ತು ವಿ. ಜಾನ್‌ ಬಂಧಿತರು. ಇವರಿಂದ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ₹3 ಕೋಟಿ ಬೆಳೆಬಾಳುವ ವಿಗ್ರಹಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಾಕತೀಯರ ಕಾಲಕ್ಕೆ ಸೇರಿದ್ದು ಎನ್ನಲಾದ  ಶ್ರೀರಾಮ, ಸೀತೆ, ಲಕ್ಷಣ ಹಾಗೂ ಇತರ 9 ವಿಗ್ರಹಗಳನ್ನು ವಶಪಡಿಸಿಕೊಂಡಿದ್ದು, ಇವುಗಳನ್ನು ರಾಮಾಲಯಂ ದೇವಾಲಯದಿಂದ ಕಳವುಗೈದಿರಬಹುದು ಎಂದು ಪೊಲೀಸರು ಹೇಳಿದ್ದಾರೆ.

 

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !