ಭಾನುವಾರ, ಜನವರಿ 19, 2020
24 °C

ಕಾಶ್ಮೀರದಲ್ಲಿ ಹಿಮಕುಸಿತ: ಮೂವರು ಯೋಧರು ಹುತಾತ್ಮ, ಓರ್ವ ನಾಪತ್ತೆ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಕುಪ್ವಾರ ಜಿಲ್ಲೆ ಮಾಚಿಲ್ ವಲಯದ ಸೇನಾ ಠಾಣೆಯ ಮೇಲೆ ಹಠಾತ್ ಭಾರೀ ಪ್ರಮಾಣ ಹಿಮ ಕುಸಿದು ಮೂವರು ಯೋಧರು ಹುತಾತ್ಮರಾಗಿದ್ದಾರೆ. ಮತ್ತೋರ್ವ ಯೋಧ ಹಿಮದಡಿ ಸಿಲುಕಿ ನಾಪತ್ತೆಯಾಗಿದ್ದಾರೆ.

ಗಾಯಗೊಂಡಿರುವ ಓರ್ವ ಯೋಧನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸೇನಾ ಠಾಣೆಯ ಮೇಲೆ ಸೋಮವಾರ ಮಧ್ಯರಾತ್ರಿ ರಾತ್ರಿ 1 ಗಂಟೆಗೆ ಹಿಮದ ರಾಶಿ ಕುಸಿಯಿತು.

ಗಂಡರ್‌ಬಲ್ ಜಿಲ್ಲೆಯಲ್ಲಿ ಕುಸಿದ ಹಿಮದ ರಾಶಿಯಲ್ಲಿ ಸಿಲುಕಿದ್ದ ಒಂಭತ್ತು ಮಂದಿಯನ್ನು ಯೋಧರು ರಕ್ಷಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆ ರಾತ್ರಿಯಿಡೀ ನಡೆಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಉತ್ತರ ಕಾಶ್ಮೀರದ ಹಲವೆಡೆ ಕಳೆದ 48 ಗಂಟೆಗಳ ಅವಧಿಯಲ್ಲಿ ಭಾರೀ ಪ್ರಮಾಣದಲ್ಲಿ ಹಿಮಕುಸಿತ ಸಂಭವಿಸಿದೆ. ಬಾರಾಮುಲ್ಲಾ ಜಿಲ್ಲೆಯಲ್ಲಿ ಹಿಮದಡಿ ಸಿಲುಕಿದ್ದ ಇಬ್ಬರು ಯುವತಿಯರನ್ನು ಸ್ಥಳೀಯರು ರಕ್ಷಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು