ಗುರುವಾರ , ಜುಲೈ 16, 2020
21 °C

494 ದೇಶೀಯ ವಿಮಾನಗಳಲ್ಲಿ 38 ಸಾವಿರಕ್ಕೂ ಅಧಿಕ ಜನರ ಪ್ರಯಾಣ: ಕೇಂದ್ರ ಸರ್ಕಾರ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ನವದೆಹಲಿ: ಒಟ್ಟು 494 ದೇಶೀಯ ವಿಮಾನಗಳಲ್ಲಿ 38,078 ಜನರು ಗುರುವಾರ ಪ್ರಯಾಣಿಸಿದ್ದಾರೆ ಎಂದು ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಶುಕ್ರವಾರ ತಿಳಿಸಿದ್ದಾರೆ.

ಕೊರೊನಾ ವೈರಸ್ ಸೋಂಕು ಹಿನ್ನೆಲೆಯಲ್ಲಿ ಲಾಕ್‌ಡೌನ್ ಘೋಷಿಸಿದ ನಂತರ ಎಲ್ಲ ದೇಶೀಯ ವಿಮಾನಗಳನ್ನು ಮಾರ್ಚ್ 25ರಿಂದ ಮೇ 24ರವರೆಗೆ ಭಾರತದಲ್ಲಿ ಸ್ಥಗಿತಗೊಳಿಸಲಾಗಿತ್ತು.

ಮೇ 28ರಂದು ರಾತ್ರಿ 11: 59 ಗಂಟೆಯವರೆಗಿನ ದೇಶೀಯ ವಿಮಾನಯಾನದ ಅಂಕಿ ಅಂಶಗಳನ್ನು ಟ್ವೀಟ್‌ ಮೂಲಕ ನೀಡಿರುವ ಪುರಿ, '494 ವಿಮಾನಗಳು ನಿರ್ಗಮಿಸಿದ್ದು, 38,078 ಪ್ರಯಾಣಿಕರನ್ನು ಹೊತ್ತೊಯ್ದಿವೆ. 493 ವಿಮಾನಗಳು ಆಗಮಿಸಿದ್ದು 38,389 ಪ್ರಯಾಣಿಕರನ್ನು ಹೊತ್ತು ತಂದಿವೆ' ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು