ಹೈದರಾಬಾದ್‌: ಐದು ವರ್ಷದ ಬಾಲಕಿ ಮೇಲೆ ಶಾಲಾ ಆವರಣದಲ್ಲೇ ಅತ್ಯಾಚಾರ

7

ಹೈದರಾಬಾದ್‌: ಐದು ವರ್ಷದ ಬಾಲಕಿ ಮೇಲೆ ಶಾಲಾ ಆವರಣದಲ್ಲೇ ಅತ್ಯಾಚಾರ

Published:
Updated:

ಹೈದರಾಬಾದ್‌: ಇಲ್ಲಿನ ಶಾಲೆಯೊಂದರಲ್ಲಿ ಐದು ವರ್ಷದ ಬಾಲಕಿ ಮೇಲೆ ಸಿಬ್ಬಂದಿಯೇ ಅತ್ಯಾಚಾರವೆಸಗಿರುವ ಪ್ರಕರಣ ವರದಿಯಾಗಿದೆ.

ಈ ಸಂಬಂಧ ಆರೋಪಿಯೊಬ್ಬನನ್ನು ಬಂಧಿಸಿರುವ ಗೋಲ್ಕಂಡಾ ಪೊಲೀಸರು, ‘ಆರೋಪಿಯು ಚಾಕೋಲೆಟ್‌ ಕೊಡಿಸುವ ನೆಪದಲ್ಲಿ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದಾನೆ’ ಎಂದು ತಿಳಿಸಿದ್ದಾರೆ.

‘ಎಲ್‌ಕೆಜಿ ಓದುತ್ತಿರುವ ಐದು ವರ್ಷದ ಬಾಲಕಿಯ ಪೋಷಕರು ನಿನ್ನೆ (ಶನಿವಾರ) ಠಾಣೆಗೆ ಬಂದು ಘಟನೆ ಸಂಬಂಧ ದೂರು ನೀಡಿದ್ದರು. ಆರೋಪಿಯನ್ನು ಬಂಧಿಸಿದ್ದು, ಭಾರತೀಯ ದಂಡ ನೀತಿ ಸಂಹಿತೆ(ಐಪಿಸಿ)ಯ ಪೊಕ್ಸೋ(ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ) ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ’ ಎಂದು ಪೊಲೀಸರು ಹೇಳಿದ್ದಾರೆ.

ಏತನ್ಮಧ್ಯೆ, ಆಕ್ರೋಶಗೊಂಡ ಸ್ಥಳೀಯರು ಶಾಲೆಯ ಆಸ್ತಿ ಹಾನಿಗೊಳಿಸಿದ್ದಾರೆ. ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ.

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 1

  Sad
 • 0

  Frustrated
 • 3

  Angry

Comments:

0 comments

Write the first review for this !