ಶುಕ್ರವಾರ, ಜೂಲೈ 3, 2020
23 °C

8 ವರ್ಷಗಳಲ್ಲಿ 750 ಹುಲಿಗಳ ಸಾವು: ಆರ್‌ಟಿಐನಿಂದ ಮಾಹಿತಿ ಬಹಿರಂಗ

ಏಜನ್ಸಿಸ್ Updated:

ಅಕ್ಷರ ಗಾತ್ರ : | |

ನವದೆಹಲಿ: ಕಳ್ಳಬೇಟೆ ಹಾಗೂ ಇತರೆ ಕಾರಣಗಳಿಂದ ಕಳೆದ ಎಂಟು ವರ್ಷಗಳ ಅವಧಿಯಲ್ಲಿ ಸುಮಾರು 750 ಹುಲಿಗಳು ಸತ್ತಿವೆ ಎಂದು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್‌ಟಿಸಿಎ) ಮಾಹಿತಿ ನೀಡಿದೆ.

ಈ ಪೈಕಿ ಮಧ್ಯಪ್ರದೇಶದಲ್ಲಿ ಹೆಚ್ಚು ಹುಲಿಗಳು ಮೃತಪಟ್ಟಿವೆ. ಕರ್ನಾಟಕ ಹಾಗೂ ಮಹಾರಾಷ್ಟ್ರ ನಂತರದ ಸ್ಥಾನದಲ್ಲಿವೆ.  

750 ಸಾವುಗಳಲ್ಲಿ 369 ನೈಸರ್ಗಿಕ ಕಾರಣಗಳಿಂದ, 168 ಹುಲಿಗಳು ಬೇಟೆಯ ಕಾರಣಗಳಿಂದ ಸಾವಿಗೀಡಾಗಿವೆ. 70 ಸಾವುಗಳು ಪರಿಶೀಲನೆ ಹಂತದಲ್ಲಿರುವುದಾಗಿಯೂ, 42 ಸಾವುಗಳು ಅಸ್ವಾಭಾವಿಕವಾಗಿರುವುದಾಗಿಯೂ ಪ್ರಾಧಿಕಾರ ಮಾಹಿತಿ ನೀಡಿದೆ.

2010ರಿಂದ 2020ರವರೆಗಿನ ಹುಲಿ ಸಾವಿನ ಮಾಹಿತಿ ನೀಡುವಂತೆ ಕೋರಿ ಪ್ರಾಧಿಕಾರಕ್ಕೆ ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಪ್ರಾಧಿಕಾರವು 2012ರಿಂದ ಎಂಟು ವರ್ಷಗಳ ಮಾಹಿತಿ ಒದಗಿಸಿದೆ. ಇಷ್ಟು ದೊಡ್ಡ ಸಂಖ್ಯೆಯಲ್ಲಿ ವ್ಯಾಘ್ರಗಳ ಸಾವಿಗೆ ವನ್ಯಜೀವಿ ಕಾರ್ಯಕರ್ತರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು