ದೇಶದಲ್ಲಿ ಆಫ್ರಿಕನ್ ಹಂದಿ ಜ್ವರ ಪತ್ತೆ: ಅಸ್ಸಾಂನಲ್ಲಿ 2500 ಹಂದಿಗಳ ಸಾವು!

ಗುವಾಹಟಿ: ಭಾರತದಲ್ಲಿ ಇದೇ ಮೊದಲ ಬಾರಿಗೆ ಆಫ್ರಿಕನ್ ಹಂದಿ ಜ್ವರ (ಸ್ವೈನ್ ಫಿವರ್) ಪತ್ತೆಯಾಗಿದೆ. ಅಸ್ಸಾಂನಲ್ಲಿನ 306 ಹಳ್ಳಿಗಳಲ್ಲಿ ಈ ಜ್ವರಕ್ಕೆ 2,500ಕ್ಕೂ ಅಧಿಕ ಹಂದಿಗಳು ಮೃತಪಟ್ಟಿವೆ ಎಂದು ಪಶುಸಂಗೋಪನಾ ಇಲಾಖೆಯ ಸಚಿವ ಅತುಲ್ ಬೋರಾ ತಿಳಿಸಿದರು.
ಸೋಂಕಿರುವ ಪ್ರಾಣಿಗಳನ್ನು ಕೊಲ್ಲಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಹೀಗಿದ್ದರೂ, ಈ ಕ್ರಮಕ್ಕೆ ಮುಂದಾಗದೆ ಸೋಂಕು ಹರಡುವುದನ್ನು ತಡೆಯಲು ಸರ್ಕಾರ ಪರ್ಯಾಯ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಬೊರಾ ತಿಳಿಸಿದರು. ‘ಸ್ವೈನ್ ಫ್ಲು’ ಪ್ರಾಣಿಗಳಿಂದ ಮನುಷ್ಯರಿಗೆ ಹರಡುವ ಸಾಧ್ಯತೆ ಇದೆ. ಆದರೆ ‘ಸ್ವೈನ್ ಫಿವರ್’ ಮನುಷ್ಯರಿಗೆ ಹರಡುವುದಿಲ್ಲ. ಹೀಗಾಗಿ ಜನರು ಆತಂಕಪಡುವ ಅವಶ್ಯಕತೆ ಇಲ್ಲ ಎಂದು ತಿಳಿಸಲಾಗಿದೆ.
ಅರುಣಾಚಲ ಪ್ರದೇಶ ಮತ್ತು ಚೀನಾದ ಗಡಿ ಭಾಗದ ಕ್ಸಿಜಾಂಗ್ ಪ್ರಾಂತ್ಯದಿಂದ ಆಫ್ರಿಕನ್ ಹಂದಿ ಜ್ವರ ಬಂದಿದೆ ಎಂದು ಪಶುಸಂಗೋಪನಾ ಸಚಿವ ಅತುಲ್ ಬೋರಾ ತಿಳಿಸಿದ್ದಾರೆ.
ಸಿಎಂ ತೀವ್ರ ಆತಂಕ
ರಾಜ್ಯದಲ್ಲಿ ಆಫ್ರಿಕನ್ ಹಂದಿ ಜ್ವರ ದಿನೆ ದಿನೇ ಉಲ್ಭಣಿಸುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸರಬಾನಂದ ಸೋನೊವಾಲ್ ಅವರು ಕಾಯಿಲೆಯನ್ನು ನಿಭಾಯಿಸಲು ಯೋಜನೆ ರೂಪಿಸುವಂತೆ ಪಶುವೈದ್ಯರು ಮತ್ತು ಅರಣ್ಯ ಇಲಾಖೆಗೆ ಸೂಚಿಸಿದ್ದಾರೆ. ರಾಷ್ಟ್ರೀಯ ಹಂದಿ ಸಂಶೋಧನಾ ಸಂಸ್ಥೆ ಸಹಯೋಗದೊಂದಿಗೆ ಕೆಲಸ ಮಾಡುವಂತೆಯ, ರೋಗ ನಿಗ್ರಹ ಕ್ರಮ ಕೈಗೊಳ್ಳುವಂತೆಯೂ ಅವರು ತಿಳಿಸಿದ್ದಾರೆ.
ಆಫ್ರಿಕನ್ ಹಂದಿಜ್ವರದಿಂದಾಗಿ ಅಸ್ಸಾಂನಲ್ಲಿ ರೈತರು ತೀವ್ರ ಆತಂಕಕ್ಕೆ ಒಳಗಾಗಿದ್ದು, ಅವರಿಗೆ ಪರಿಹಾರದ ಪ್ಯಾಕೇಜ್ ನೀಡಲು ಸರ್ಕಾರ ನಿರ್ಧರಿಸಿದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.