ಸೋಮವಾರ, ಸೆಪ್ಟೆಂಬರ್ 20, 2021
27 °C

‘ಫೋನಿ’ ಉದ್ಭವಿಸಿದ್ದೆಲ್ಲಿ, ಹೆಸರು ಬಂದಿದ್ದು ಹೇಗೆ? ನೀವು ತಿಳಿಯಬೇಕಾದ್ದು

ಏಜನ್ಸಿಸ್‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಫೋನಿ’  ಚಂಡಮಾರುತ ತೀವ್ರ ಸ್ವರೂಪ ತಾಳಿದೆ. ಇನ್ನೇನು ಒಡಿಶಾಕ್ಕೆ ಅಪ್ಪಳಿಸಲಿರುವ ಈ ಚಂಡಿ ಮಳೆಯನ್ನು ಎದುರಿಸಲು ಅಲ್ಲಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಅಷ್ಟಕ್ಕೂ ಈ ಚಂಡಮಾರುತ ಎಂದರೇನು? ಅದರ ಆರ್ಭಟ ಹೇಗಿರಲಿದೆ? ಎಂಬುದರ ಕುರಿತು ಒಂದಷ್ಟು ಮಾಹಿತಿ ಇಲ್ಲಿದೆ. 

1. ಅಟ್ಲಾಂಟಿಕ್ ಸಾಗರದಲ್ಲಿನ ಚಂಡ ಮಾರುತಕ್ಕೆ ಹರಿಕೇನ್ (hurricane), ಹಿಂದೂ ಮಹಾಸಾಗರದಲ್ಲಿನ ವಿದ್ಯಮಾನಕ್ಕೆ `ಸೈಕ್ಲೋನ್~ (cyclone) ಮತ್ತು ಫಿಲಿಪ್ಪೀನ್ಸ್ ಮತ್ತು ಪ್ಯಾಸಿಫಿಕ್ ಸಾಗರದಲ್ಲಿನ ಬಿರುಗಾಳಿಗೆ `ಟೈಫೂನ್~ (typhoon) ಎಂದು ಕರೆಯುತ್ತಾರೆ. ಈ ಚಂಡಮಾರುತಗಳು ಅತ್ಯಂತ ಕಡಿಮೆ ಒತ್ತಡದ ಕೇಂದ್ರ ಬಿಂದುವನ್ನು ಹೊಂದಿರುತ್ತವಾದರೂ, ತೀವ್ರ ವೇಗದ ಗಾಳಿಯನ್ನು ಒಡಲಲ್ಲಿಟ್ಟುಕೊಂಡಿರುತ್ತವೆ. ಸಮುದ್ರದ ಒತ್ತಡದಿಂದ ಸೃಷ್ಟಿಯಾಗುವ ಚಂಡಮಾರುತಗಳು ಭೂ ಭಾಗದತ್ತ ಧಾವಿಸುತ್ತವೆ. 

2. ಜಗತ್ತಿನ ಯಾವ ಸಮುದ್ರ ಪ್ರದೇಶದಲ್ಲಿ ಚಂಡಮಾರುತಗಳು ಉದ್ಭವವಾಗುತ್ತವೆಯೋ ಅದಕ್ಕೆ ಸಂಬಂಧಿಸಿದ ದೇಶ ಚಂಡಮಾರುತಗಳಿಗೆ ನಾಮಕರಣ ಮಾಡುತ್ತವೆ.

3. ಬಂಗಾಳ ಕೊಲ್ಲಿಯಲ್ಲಿ ಉದ್ಭವವಾಗಿರುವ ಈ ಚಂಡಮಾರುತಕ್ಕೆ ಬಾಂಗ್ಲಾದೇಶ ನಾಮಕಾರಣ ಮಾಡಿದೆ. ‘ಫೋನಿ’  ಎಂದು ಬಾಂಗ್ಲಾದೇಶ ಕರೆದಿದೆ. ಅದನ್ನು ಫೋನಿ ಎಂದೂ ಕರೆಯಲಾಗುತ್ತಿದೆ. ಅದರ ಅರ್ಥ ಹಾವಿನ ಹೆಡೆ. 

4. ಮೇ 3ರಂದು ಭಾರತದ ಒಡಿಶಾ, ಆಂಧ್ರ ಪ್ರದೇಶ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳಕ್ಕೆ ಅಪ್ಪಳಿಸಲಿರುವ ‘ಫೋನಿ’ ಯ ಇವತ್ತಿನ ವೇಗ ಗಂಟೆಗೆ 200 ಕಿ.ಮೀ

5. ‘ಫೋನಿ’ ಯನ್ನು ಸಮರ್ಥವಾಗಿ ಎದುರಿಸಲು ಸಕಲ ಸಿದ್ಧತೆ ಮಾಡಿಕೊಂಡಿರುವ ಒಡಿಶಾ ಅದಕ್ಕಾಗಿಯೇ 879 ವಿವಿಧೋದ್ದೇಶ ಆಶ್ರಯ ವಸತಿಗಳನ್ನು ತೆರೆದಿದೆ. ಇವುಗಳಲ್ಲಿ ಏಕ ಕಾಲಕ್ಕೆ 10 ಲಕ್ಷ ಜನರಿಗೆ ವಸತಿ ಮತ್ತು ಆಹಾರ ಕಲ್ಪಿಸಬಹುದು. ‌

6. ಈ ಚಂಡಮಾರುತ ಭೂ ಭಾಗಕ್ಕೆ ಅಪ್ಪಳಿಸುವಾಗ ಅದರ ವೇಗ ಗಂಟೆಗೆ 170–180 ಕಿ.ಮೀ ಇರುವ ಸಾಧ್ಯತೆಗಳಿವೆ. ಅದು 200ಕ್ಕೂ ತಲುಪಬಹುದು ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ. 

7. ‘ಫೋನಿ’  ಸೈಕ್ಲೋನ್‌ ಕಾರಣದಿಂದಾಗಿ ಕರ್ನಾಟಕದ ಹಲವೆಡೆ ಮಳೆಯಾಗುವ ಸಾಧ್ಯತೆಗಳಿವೆ. ಈಗಾಗಲೇ ಬೆಂಗಳೂರು ಸೇರಿದಂತೆ ಹಲವೆಡೆ ಸೋಮವಾರ ರಾತ್ರಿಯಿಂದಲೇ ಭಾರಿ ಮಳೆ ಸುದಿದಿದೆ. 

8. ಮುನ್ನೆಚ್ಚರಿಕಾ ಕ್ರಮವಾಗಿ ಬಂಗಾಳ ಕೊಲ್ಲಿಯ ಆಳ ಸಮುದ್ರದಲ್ಲಿ ಮೀನುಗಾರಿಕೆ ನಡೆಸದಂತೆ ಈಗಾಗಲೇ ಮೀನುಗಾರರಿಗೆ ಸೂಚನೆ ನೀಡಲಾಗಿದೆ. 

9. 1891–2017ರ ವರೆಗೆ ಬಂಗಾಳ ಕೊಲ್ಲಿಯಲ್ಲಿ, ಏಪ್ರಿಲ್‌ ತಿಂಗಳಲ್ಲಿ ಕೇವಲ 14 ಸೈಕ್ಲೋನ್‌ಗಳಷ್ಟೇ ಉದ್ಭವಗೊಂಡಿದ್ದು ಅದರಲ್ಲಿ ಒಂದು ಮಾತ್ರ ಭಾರತದ ಭೂ ಭಾಗದ ಕಡೆಗೆ ಬಂದಿತ್ತು. ‘ಫೋನಿ’  ಎರಡನೇಯದ್ದು. 

10. 2008ರಲ್ಲಿ ರೂಪುಗೊಂಡಿದ್ದ ನರ್ಗಿಸ್‌ ಚಂಡಮಾರುತ ಮಯನ್ಮಾರ್‌ನಲ್ಲಿ ದಾಂಧಲೆ ಸೃಷ್ಟಿ ಮಾಡಿತ್ತು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು