ಗುರುವಾರ , ಫೆಬ್ರವರಿ 27, 2020
19 °C

ಬೋಡೊಲ್ಯಾಂಡ್: ಮಹತ್ವದ ಒಪ್ಪಂದಕ್ಕೆ ಕೇಂದ್ರ ಸಹಿ

ಪಿಟಿಐ Updated:

ಅಕ್ಷರ ಗಾತ್ರ : | |

Union Home Minister Amit Shah, Assam CM Sarbananda Sonowal and others after the signing of an accord between GOI, Assam Govt and Bodo representatives, in New Delhi.

ನವದೆಹಲಿ: ಅಸ್ಸಾಂನ ಉಗ್ರಗಾಮಿ ಗುಂಪುಗಳಲ್ಲಿ ಒಂದಾದ ನ್ಯಾಷನಲ್‌ ಡೆಮಾಕ್ರಟಿಕ್‌ ಫ್ರಂಟ್‌ ಆಫ್ ಬೋಡೊಲ್ಯಾಂಡ್‌ (ಎನ್‌ಡಿಎಫ್‌ಬಿ)ನೊಂದಿಗೆ ಸರ್ಕಾರ ಒಪ್ಪಂದಕ್ಕೆ ಸಹಿ ಹಾಕಿದ್ದು, ಇದು ಆ ಭಾಗಕ್ಕೆ ಆರ್ಥಿಕ ಹಾಗೂ ರಾಜಕೀಯ ಲಾಭ ತಂದುಕೊಡುವ ನಿರೀಕ್ಷೆ ಇದೆ.

ಬೋಡೊಲ್ಯಾಂಡ್ ಪ್ರತ್ಯೇಕ ರಾಜ್ಯಕ್ಕಾಗಿ ಚಳವಳಿ ನಡೆಸುತ್ತಿರುವ ಆಲ್ ಬೋಡೊ ವಿದ್ಯಾರ್ಥಿ ಸಂಘ (ಎಬಿಎಸ್‌ಯು) ಸಹ ಒಪ್ಪಂದಕ್ಕೆ ಸಹಿ ಹಾಕಿದೆ.

ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರ ಸಮ್ಮುಖದಲ್ಲಿ ನಡೆದ ಈ ತ್ರಿಪಕ್ಷೀಯ ಒಪ್ಪಂದದ ಸಂದರ್ಭದಲ್ಲಿ ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೋನವಾಲ್‌, ಎನ್‌ಡಿಎಫ್‌ಬಿ, ಎಬಿಎಸ್‌ಯುನ ಹಿರಿಯ ನಾಯಕರು ಹಾಗೂ ಗೃಹ ಸಚಿವಾಲಯದ ಜಂಟಿ ಕಾರ್ಯದರ್ಶಿ ಸತ್ಯೇಂದ್ರ ಗರ್ಗ್‌ ಹಾಗೂ ಅಸ್ಸಾಂ ಮುಖ್ಯಕಾರ್ಯದರ್ಶಿ ಸಂಜಯ್‌ಕುಮಾರ್ ಹಾಜರಿದ್ದರು.

ಇದನ್ನೂ ಓದಿಬೋಡೊಲ್ಯಾಂಡ್‌: ಮಹತ್ವದ ಒಪ್ಪಂದಕ್ಕೆ ಕೇಂದ್ರ ಸಜ್ಜು

‌ಬೋಡೊ ಸಮಸ್ಯೆಗೆ ಸಮಗ್ರ ಪರಿಹಾರ ನೀಡುವ ಸಂಬಂಧ ನಡೆದ ಈ ಒಪ್ಪಂದವು ಐತಿಹಾಸಿಕ ದಾಖಲೆ ಎಂದು ಕೇಂದ್ರದ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ ತಿಳಿಸಿದ್ದಾರೆ.
 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು