ಮಂಗಳವಾರ, ಜನವರಿ 28, 2020
18 °C

ಯುವಜನತೆಯ ಭವಿಷ್ಯ ಹಾಳು ಮಾಡಿದ ಮೋದಿ–ಶಾ ಜೋಡಿ: ರಾಹುಲ್ ಗಾಂಧಿ

ಪಿಟಿಐ Updated:

ಅಕ್ಷರ ಗಾತ್ರ : | |

Rahul Gandhi

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹಸಚಿವ ಅಮಿತ್ ಶಾ ಅವರು ದೇಶದ ಯುವಜನಾಂಗದ ಭವಿಷ್ಯವನ್ನು ಹಾಳುಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಭಾನುವಾರ ಆರೋಪಿಸಿದ್ದಾರೆ. ಹದಗೆಟ್ಟಿರುವ ದೇಶದ ಆರ್ಥಿಕ ಪರಿಸ್ಥಿತಿ ಹಾಗೂ ಉದ್ಯೋಗ ನಷ್ಟದ ಬಿಕ್ಕಟ್ಟಿನಿಂದ ಪಾರಾಗಲು ದ್ವೇಷಕ್ಕೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂದಿದ್ದಾರೆ. 

ಸಿಎಎ ಹಾಗೂ ಎನ್‌ಆರ್‌ಸಿ ವಿಚಾರವಾಗಿ ಪ್ರತಿಪಕ್ಷಗಳು ದಾರಿ ತಪ್ಪಿಸುತ್ತಿವೆ ಎಂಬ ಪ್ರಧಾನಿ ಆರೋಪಕ್ಕೆ ರಾಹುಲ್ ಈ ಪ್ರತಿಕ್ರಿಯೆ ನೀಡಿದ್ದಾರೆ. 

ಅಮಿತ್ ಶಾಗೆ ದಿಗ್ಬಂಧನ: ಎಚ್ಚರಿಕೆ

ಪೌರತ್ವ (ತಿದ್ದುಪಡಿ) ಕಾಯ್ದೆಯನ್ನು (ಸಿಎಎ) ಕೇಂದ್ರ ಸರ್ಕಾರ ತಕ್ಷಣ ವಾಪಸ್ ಪಡೆಯದಿದ್ದಲ್ಲಿ, ಅಮಿತ್ ಶಾ ಅವರು ಕೋಲ್ಕತ್ತ ವಿಮಾನ ನಿಲ್ದಾಣಕ್ಕೆ ಬಂದಾಗ ಅವರಿಗೆ ದಿಗ್ಬಂಧನ ವಿಧಿಸಲಾಗುವುದು ಎಂದು ಪಶ್ಚಿಮ ಬಂಗಾಳದ ಸಚಿವ ಹಾಗೂ ಜಾಮಿಯತ್ ಉಲೇಮಾ ರಾಜ್ಯ ಮುಖ್ಯಸ್ಥ ಸಿದ್ದಿಕುಲ್ಲಾ ಚೌಧರಿ ಕೋಲ್ಕತ್ತದಲ್ಲಿ ಎಚ್ಚರಿಸಿದ್ದಾರೆ.

ಮೋದಿ ನನ್ನ ಹೆಸರಿನಲ್ಲಿ ದಾರಿ ತಪ್ಪಿಸುತ್ತಿದ್ದಾರೆ

‘ನನ್ನ ಹೆಸರು ಹೇಳಿಕೊಂಡು ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನರ ದಾರಿ ತಪ್ಪಿಸುತ್ತಿದ್ದಾರೆ’ ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೊಟ್ ಭಾನುವಾರ ಜೈಪುರದಲ್ಲಿ ಆರೋಪಿಸಿದ್ದಾರೆ.

‘ಮೋದಿ ಅವರು ಏನನ್ನು ಹೇಳಲು ಹೊರಟಿದ್ದಾರೆ? ಪಾಕಿಸ್ತಾನದಲ್ಲಿ ಕಿರುಕುಳಕ್ಕೆ ಒಳಗಾಗಿ ರಾಜಸ್ಥಾನದ ಗಡಿ ಭಾಗಕ್ಕೆ ಬರುತ್ತಿರುವ ಜನರಿಗೆ ಸೌಲಭ್ಯ ಕಲ್ಪಿಸುವಂತೆ ಅಂದಿನ ಗೃಹಸಚಿವ ಪಿ. ಚಿದಂಬರಂ ಅವರಿಗೆ ನಾನು ಪತ್ರ ಬರೆದಿದ್ದರಲ್ಲಿ ಏನು ತಪ್ಪಿದೆ?’ ಎಂದು ಗೆಹ್ಲೊಟ್ ಪ್ರಶ್ನಿಸಿದ್ದಾರೆ. 

ರಾಮ್‌ಲೀಲಾ ಮೈದಾನದಲ್ಲಿ ಮಾಡಿದ್ದ ಭಾಷಣದಲ್ಲಿ  ಮೋದಿ ಅವರು ಗೆಹ್ಲೋಟ್ ಹೆಸರು ಪ್ರಸ್ತಾಪಿಸಿದ್ದರು. ಡಿ. 11ರಂದು ಅಮಿತ್ ಶಾ ಅವರು ಇದೇ ವಿಚಾರವನ್ನು ಸಂಸತ್ತಿನಲ್ಲಿ ಎತ್ತಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು