ಭಾನುವಾರ, ಜೂಲೈ 5, 2020
28 °C

ಅಂಪನ್ ಚಂಡಮಾರುತ ಸಂಕಷ್ಟ

ಪಿಟಿಐ Updated:

ಅಕ್ಷರ ಗಾತ್ರ : | |

chennai

ಕೋಲ್ಕತ್ತ/ನವದೆಹಲಿ : ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಅಂಪನ್‌ ಚಂಡಮಾರುತವು ಬುಧವಾರ ಮಧ್ಯಾಹ್ನ ಪಶ್ಚಿಮ ಬಂಗಾಳದ ಕರಾವಳಿಗೆ ಅಪ್ಪಳಿಸಲಿದೆ. ತೀವ್ರ ಬಿರುಗಾಳಿ ಮತ್ತು ಭಾರಿ ಮಳೆ ಉಂಟಾಗಲಿರುವ ಕಾರಣ ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.

ಅಂಪನ್‌ ಚಂಡಮಾರುತವು ಸೋಮವಾರ ತೀವ್ರ ಚಂಡಮಾರುತದ (ಸೂಪರ್ ಸೈಕ್ಲೋನ್‌) ಸ್ವರೂಪ ಪಡೆದಿತ್ತು. ಹೀಗಾಗಿ ಆಂಧ್ರ
ಪ್ರದೇಶದ ಕರಾವಳಿ ಮತ್ತು ಒಡಿಶಾದ ಎಲ್ಲಾ ಕರಾವಳಿ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇತ್ತು. ಆದರೆ, ಮಂಗಳವಾರ ಮಧ್ಯಾಹ್ನದ ವೇಳೆಗೆ ಚಂಡಮಾರುತದ ತೀವ್ರತೆ ಕಡಿಮೆಯಾಯಿತು. ಹೀಗಾಗಿ ಒಡಿಶಾದ ಕೆಲವು ಕರಾವಳಿ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಯಿತು. ಹಲವೆಡೆ ತೀವ್ರ ಬಿರುಗಾಳಿ ಬೀಸಿತು. ಪಶ್ಚಿಮ ಬಂಗಾಳದ ಹಲವೆಡೆಯೂ ಭಾರಿ ಮಳೆಯಾಯಿತು.

- ಚಂಡಮಾರುತವು ಬುಧವಾರ ಮಧ್ಯಾಹ್ನ ಪಶ್ಚಿಮ ಬಂಗಾಳದ ಕರಾವಳಿ ಪಟ್ಟಣ ದಿಗಾಕ್ಕೆ ಅಪ್ಪಳಿಸಲಿದೆ

- ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (ಎನ್‌ಡಿಆರ್‌ಎಫ್‌) ಹಲವು ತುಕಡಿಗಳನ್ನು ನಿಯೋಜನೆ ಮಾಡಲಾಗಿದೆ

- ಪಶ್ಚಿಮ ಬಂಗಾಳದ ಪರ್ಬಾ ಮೇದಿನಿಪುರ ಜಿಲ್ಲೆ ಮತ್ತು ಕರಾವಳಿ ಗ್ರಾಮಗಳ 3 ಲಕ್ಷ ಜನರನ್ನು ತೆರವು ಮಾಡಲಾಗಿದೆ

- ತೆರವು ಮಾಡಲಾದ ಜನರನ್ನು, ಸುರಕ್ಷಿತ ಪ್ರದೇಶಗಳಲ್ಲಿನ ಶಿಬಿರಗಳಲ್ಲಿ ಇರಿಸಲಾಗಿದೆ

- ಕೋವಿಡ್‌ ಸೋಂಕು ವ್ಯಾಪಕವಾಗಿ ಇರುವ ಸಂದರ್ಭದಲ್ಲೇ ಚಂಡಮಾರುತ ಬಂದಿರುವುದು ಬಿಕ್ಕಟ್ಟಿಗೆ ಕಾರಣವಾಗಿದೆ. ಶಿಬಿರಗಳಲ್ಲಿ ಅಂತರ ಕಾಯ್ದುಕೊಳ್ಳುವಿಕೆಯನ್ನು ನಿರ್ವಹಿಸಲು ಎನ್‌ಡಿಆರ್‌ಎಫ್‌ ಸಿಬ್ಬಂದಿಯನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜನೆ ಮಾಡಲಾಗಿದೆ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು