ಶುಕ್ರವಾರ, ಏಪ್ರಿಲ್ 10, 2020
19 °C

‘ಪಾಕ್‌ ಮೂಲದ ಮತ್ತೊಂದು ಡ್ರೋನ್‌ ವಶ’

ಪಿಟಿಐ Updated:

ಅಕ್ಷರ ಗಾತ್ರ : | |

ಅಮೃತಸರ: ಇಲ್ಲಿನ ಭಾರತ–ಪಾಕಿಸ್ತಾನ ಗಡಿ ಭಾಗದಲ್ಲಿ ಪಾಕಿಸ್ತಾನದ ಇನ್ನೊಂದು ಡ್ರೋನ್‌ ಕಂಡುಬಂದಿದ್ದು, ಪೊಲೀಸರು ವಶಪಡಿಸಿಕೊಂಡಿದ್ದಾರೆ. ‘ಕಳೆದ ಮೂರು ದಿನಗಳಲ್ಲಿ ವಶಪಡಿಸಿಕೊಂಡ ಎರಡನೇ ಡ್ರೋನ್‌ ಇದಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಗಡಿ ಗ್ರಾಮದಲ್ಲಿ ಇದು ಕಂಡುಬಂದಿದ್ದು, ಪಾಕಿಸ್ತಾನ ಡ್ರೋನ್‌ ಬಳಸಿ ಶಸ್ತ್ರಾಸ್ತ್ರ ಮತ್ತು ಸ್ಫೋಟಕಗಳನ್ನು ಹಾಕುತ್ತಿದೆ ಎಂದು ತಿಳಿಸಿದರು. ಇದಕ್ಕೂ ಮೊದಲು ಪೊಲೀಸರು ಟರ್ನ್‌ ಟರನ್‌ ಬಳಿ ಭಾಗಶಃ ಸುಟ್ಟಿದ್ದ ಮಾನವರಹಿತ ಯಂತ್ರ ಜಪ್ತಿ ಮಾಡಿದ್ದರು.

ಪಾಕಿಸ್ತಾನದ ಈ ಕ್ರಮ ಪಂಜಾಬ್ ಮತ್ತು ಆಸುಪಾಸಿನ ಇತರೆ ರಾಜ್ಯಗಳಲ್ಲಿ ಪೊಲೀಸರ ಕಾರ್ಯಭಾರ ಹೆಚ್ಚಿಸಿದೆ. ಸದ್ಯ, ಡ್ರೋನ್‌ ಅನ್ನು ಮಹಾವಾ ಗ್ರಾಮದಲ್ಲಿ ವಶಕ್ಕೆ ಪಡೆದಿದ್ದು, ಈ ಸಂಬಂಧ ಖಲಿಸ್ತಾನ್‌ ಜಿಂದಾಬಾದ್ ಪಡೆ (ಕೆಝಡ್‌ಎಫ್‌)ನ ನಾಲ್ವರು ಸದಸ್ಯರನ್ನೂ ಪೊಲೀಸರು ಬಂಧಿಸಿದ್ದಾರೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು