ಗುರುವಾರ , ಜನವರಿ 23, 2020
20 °C

ಬೇಹುಗಾರಿಕೆ ಜೇಮ್ಸ್‌ ಬಾಂಡ್‌ ರೀತಿ ಅಲ್ಲ: ನರವಾಣೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಪುಣೆ: ‘ನಿಜವಾದ ಬೇಹುಗಾರಿಕೆ ಎನ್ನುವುದು ಗ್ಲಾಮರಸ್‌ ಲೋಕದ ಜೇಮ್ಸ್‌ ಬಾಂಡ್‌ ರೀತಿ ಅಲ್ಲ’ ಎಂದು ಮುಂದಿನ ಸೇನಾ ಮುಖ್ಯಸ್ಥರಾಗಿ ನಿಯೋಜನೆಗೊಂಡಿರುವ ಲೆಫ್ಟಿನೆಂಟ್‌ ಜನರಲ್ ಮನೋಜ್ ಮುಕುಂದ್ ನರವಾಣೆ ವಿಶ್ಲೇಷಿಸಿದ್ದಾರೆ.

ಮಾಜಿ ಪತ್ರಕರ್ತ ನಿತಿನ್‌ ಗೋಖಲೆ ಬರೆದಿರುವ ‘ಆರ್‌.ಎನ್‌. ಕಾವ್‌: ಜಂಟಲ್‌ಮನ್‌ ಸ್ಪೈಮಾಸ್ಟರ್‌’ ಪುಸ್ತಕವನ್ನು ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಿ ಮಾತನಾಡಿದ ಅವರು, ‘ಸಾಮಾನ್ಯವಾಗಿ ಬೇಹುಗಾರಿಕೆ ಎಂದಾಕ್ಷಣ ಕಾಲ್ಪನಿಕ ಲೋಕದಲ್ಲಿ ಮುಳುಗುತ್ತೇವೆ. ಬೇಹುಗಾರಿಕೆ ಎನ್ನುವುದು ಕಂಡರಿಯದ ಮತ್ತು ಕೇಳರಿಯದ ವಿಷಯಗಳನ್ನು ಸಂಗ್ರಹಿಸುವುದು ಹಾಗೂ ತೆರೆಯ ಹಿಂದಿನ ಅಪಾರ ಮಾಹಿತಿಯನ್ನು ವಿಶ್ಲೇಷಿಸುವುದಾಗಿದೆ’ ಎಂದರು.

‘ಸೇನೆಯ ಯಶಸ್ವಿ ಕಾರ್ಯಾಚರಣೆಗೆ ಬೇಹುಗಾರಿಕೆ ಅತ್ಯಂತ ಮಹತ್ವ ಪಡೆದಿದೆ. ಯಾವುದೇ ಕಾರ್ಯಾಚರಣೆ ಆರಂಭದಲ್ಲಿ ಬೇಹುಗಾರಿಕೆಯಿಂದ ಶತ್ರುಗಳ ಬಗ್ಗೆ ಯಾವ ರೀತಿ ಮಾಹಿತಿ ದೊರೆತಿದೆ ಎನ್ನುವ ವಿಷಯ ಪ್ರಸ್ತಾಪವಾಗುತ್ತದೆ’ ಎಂದು ತಿಳಿಸಿದರು.

‘ವಿವಿಧ ಬೇಹುಗಾರಿಕೆ ಇಲಾಖೆಗಳ ಬೆಂಬಲವಿಲ್ಲದೆಯೇ ಯಾವುದೇ ಸೇನಾ ಕಾರ್ಯಾಚರಣೆ ಯಶಸ್ವಿ
ಯಾಗಲು ಸಾಧ್ಯವೇ ಇಲ್ಲ’ ಎಂದು ಹೇಳಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು