ಶನಿವಾರ, ಸೆಪ್ಟೆಂಬರ್ 25, 2021
22 °C

ಅರವಿಂದ ಕೇಜ್ರಿವಾಲ್‌ಗೆ ಕಪಾಳ ಮೋಕ್ಷ: ಇದು ಬಿಜೆಪಿ ಕೃತ್ಯ ಎಂದು ಎಎಪಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ದೆಹಲಿ ಮುಖ್ಯಮಂತ್ರಿ, ಎಎಪಿ ಮುಖಂಡ ಅರವಿಂದ ಕೇಜ್ರಿವಾಲ್‌ಗೆ ವ್ಯಕ್ತಿಯೊಬ್ಬ ಹಲ್ಲೆ ಮಾಡಿರುವ ಘಟನೆಗೆ ಸಂಬಂಧಿಸಿದಂತೆ ಈ ಕೃತ್ಯವನ್ನು ಬಿಜೆಪಿ ನಡೆಸಿದೆ ಎಂದು ಎಎಪಿ ಆರೋಪಿಸಿದೆ. 

ಇಲ್ಲಿನ ಮೋತಿ ನಗರ ಪ್ರದೇಶದಲ್ಲಿ ಶನಿವಾರ ಸಂಜೆ ರೋಡ್‌ ಶೋ ನಡೆಸುತ್ತಿದ್ದ ಸಂದರ್ಭದಲ್ಲಿ ಸಿಎಂ ಕೇಜ್ರಿವಾಲ್‌ ನಿಂತಿದ್ದ ಜೀಪಿನ ಮೇಲೇರಿ ಅವರತ್ತ ನುಗ್ಗಿರುವ ವ್ಯಕ್ತಿ ಕಪಾಳಕ್ಕೆ ಹೊಡೆದಿದ್ದಾನೆ. 

ಚುನಾವಣಾ ಕಣದಲ್ಲಿ ಎಎಪಿಯನ್ನು ಸೋಲಿಸಲಾಗದ ಬಿಜೆಪಿ, ಅರವಿಂದ ಕೇಜ್ರಿವಾಲ್‌ ಅವರ ಮೇಲೆ ದೈಹಿಕವಾಗಿ ಹಲ್ಲೆ ಮಾಡಿದೆ ಎಂದು ಎಎಪಿ ಶಾಸಕ ಸೌರಬ್‌ ಭಾರಾಧ್ವಜ್ ತಿಳಿಸಿದ್ದಾರೆ. 

ನಿಮಗೆ ಕೇಜ್ರಿವಾಲ್‌ ಅವರನ್ನು ಹತ್ಯೆ ಮಾಡಲು ಸಾಧ್ಯವೆ? ಎಂದು ದೆಹಲಿ ಉಪಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ ಮೋದಿ ಮತ್ತು ಅಮಿತ್‌ ಶಾ ಅವರನ್ನು ಪ್ರಶ್ನೆ ಮಾಡಿದ್ದಾರೆ. ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಬಿಜೆಪಿ ಇಂತಹ ಹೇಡಿ ಕೃತ್ಯವನ್ನು ನಡೆಸುತ್ತಿದೆ ಎಂದು ಮನೀಶ್‌ ಟ್ವೀಟ್‌ ಮಾಡಿದ್ದಾರೆ. 

ಸೋಲು ಭಯದಿಂದ ಬಿಜೆಪಿ ಇಂತಹ ಕೆಲಸಗಳನ್ನು ಮಾಡಿಸುತ್ತಿದೆ. ಬಿಜೆಪಿ ದೇಶದಾದ್ಯಂತ ಸೋಲುವುದು ಖಚಿತ, ಮೋದಿ ಮನೆಗೆ ವಾಪಾಸ್‌ ಹೋಗಲಿದ್ದಾರೆ ಎಂದು ತೃಣಮೂಲ ಕಾಂಗ್ರೆಸ್ ಪಕ್ಷ ಟ್ವೀಟ್‌ ಮಾಡಿದೆ.

ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್‌ ಅವರ ಮೇಲಿನ ದಾಳಿ ಬಿಜೆಪಿಯ ಹತಾಶೆಯನ್ನು ಎತ್ತಿ ತೋರಿಸುತ್ತದೆ ಎಂದು ಟಿಡಿಪಿಯ ಮುಖ್ಯಸ್ಥ ಚಂದ್ರಬಾಬು ನಾಯ್ಡು ಹೇಳಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು