ಸೋಮವಾರ, ಫೆಬ್ರವರಿ 24, 2020
19 °C

ಕೇಜ್ರಿವಾಲ್‌ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಬರ್ತಾನೆ ಮಫ್ಲರ್ ಪುಟಾಣಿ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ನವದೆಹಲಿ: ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್‌ ದೆಹಲಿ ಮುಖ್ಯಮಂತ್ರಿಯಾಗಿ 3ನೇ ಬಾರಿಗೆ ಪ್ರಮಾಣ ವಚನ ಸ್ವೀಕರಿಸುವ ಸಮಾರಂಭಕ್ಕೆ ಮುದ್ದು ಮಫ್ಲರ್ ಪುಟಾಣಿಯನ್ನೂ ಆಹ್ವಾನಿಸಲಾಗಿದೆ.

ಮುಂದಿನ ಭಾನುವಾರ (ಫೆ.16) ರಾಮ್‌ ಲೀಲಾ ಮೈದಾನದಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ.

ದೆಹಲಿ ವಿಧಾನಸಭಾ ಚುನಾವಣೆಯ ಮತ ಎಣಿಕೆ ನಡೆದ ಮಂಗಳವಾರ ಅರವಿಂದ್ ಕೇಜ್ರಿವಾಲ್‌ರ ಮನೆ ಮತ್ತು ಆಪ್ ಕಚೇರಿ ಸಮೀಪದ ಒಂದು ವರ್ಷ ವಯಸ್ಸಿನ ಅಯ್ಯನ್ ತೊಮಾರ್‌ ಕೇಜ್ರಿವಾಲ್‌ರಂತೆ ಕನ್ನಡಕ, ಮಫ್ಲರ್‌ ಮತ್ತು ಟೋಪಿ ತೊಟ್ಟು ಕಾಣಿಸಿಕೊಂಡಿದ್ದ.

ಅಯ್ಯನ್ ಪುಟಾಣಿಯನ್ನು ಕೇಜ್ರಿವಾಲ್‌ ಭೇಟಿಯಾಗುತ್ತಾರೆ ಕುಟುಂಬದ ಸದಸ್ಯರು ಹೇಳಿದ್ದರಾದರೂ ಮತ ಎಣಿಕೆಯ ದಿನ ಅದು ಸಾಧ್ಯವಾಗಲಿಲ್ಲ. ಅಯ್ಯನ್ ಕುಟುಂಬವು ಕೇಜ್ರಿವಾಲ್‌ಗಾಗಿ ಕಾದು ಆಪ್ ಕಚೇರಿಯಿಂದ ಹೊರಟಿತ್ತು.

ಇದೀಗ ಆಪ್‌ ಪಕ್ಷವು ಮಫ್ಲರ್ ಪುಟಾಣಿಯನ್ನು ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಆಹ್ವಾನಿಸಿದೆ. ‘ಸೂಟ್‌ ಅಪ್ ಜೂನಿಯರ್’ ಎಂದು ಆಪ್ ಟ್ವೀಟ್ ಮಾಡಿದೆ.

ಮುಂದಿನ ಭಾನುವಾರ (ಫೆ.16) ಅರವಿಂದ್ ಕೇಜ್ರಿವಾಲ್ ದೆಹಲಿ ಮುಖ್ಯಮಂತ್ರಿಯಾಗಿ ಮೂರನೇ ಬಾರಿಗೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ರಾಮ್‌ ಲೀಲಾ ಮೈದಾನದಲ್ಲಿ ಸಮಾರಂಭ ನಡೆಯಲಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು