ಗುರುವಾರ , ಅಕ್ಟೋಬರ್ 17, 2019
26 °C
ಬಿಹಾರ

ಪ್ರವಾಹ ಪರಿಸ್ಥಿತಿ ಅವಲೋಕಿಸಲು ತೆರಳಿದ್ದಾಗ ತೆಪ್ಪ ಮಗುಚಿ ನೀರಲ್ಲಿ ಮುಳುಗಿದ ಸಂಸದ

Published:
Updated:

ಪಟ್ನಾ: ಭೀಕರ ಪ್ರವಾಹಕ್ಕೆ ತುತ್ತಾಗಿರುವ ಬಿಹಾರದಲ್ಲಿ ಪರಿಸ್ಥಿತಿ ಅವಲೋಕಿಸಲು ತೆರಳಿದ ಸಂಸದರೇ ನೀರಿನಲ್ಲಿ ಮುಳುಗಿದ ಘಟನೆ ನಡೆದಿದೆ.

ಬಿಜೆಪಿ ಸಂಸದ ರಾಮ ಕೃಪಾಳ್ ಯಾದವ್ ಅವರು ಪ್ರವಾಹಪೀಡಿತ ಪಟ್ನಾದ ಮಸೌರಿಗೆ ಪರಿಸ್ಥಿತಿ ಅವಲೋಕಿಸಲು ಬುಧವಾರ ತೆರಳಿದ್ದರು. ಈ ವೇಳೆ ಚಿಕ್ಕ ತೆಪ್ಪವೊಂದರಲ್ಲಿ ಅವರನ್ನು ಕರೆದೊಯ್ಯಲಾಗಿತ್ತು. ಸಮೀಕ್ಷೆ ನಡೆಸಿ ದಡದತ್ತ ವಾಪಸಾಗುತ್ತಿದ್ದ ವೇಳೆ ಸಂಸದರಿದ್ದ ತೆಪ್ಪ ನೀರಿನಲ್ಲಿ ಮುಳುಗಿದೆ. ಈ ವೇಳೆ ಸಂಸದರೂ ಆಯ ತಪ್ಪಿ ಬಿದ್ದಿದ್ದಾರೆ. ತಕ್ಷಣವೇ ಸ್ಥಳೀಯರು ಅವರನ್ನು ರಕ್ಷಿಸಿದ್ದಾರೆ.

ಭಾರೀ ಮಳೆಯಿಂದಾಗಿ ಬಿಹಾರದಾದ್ಯಂತ ಪ್ರವಾಹ ಪರಿಸ್ಥಿತಿ ಉಂಟಾಗಿತ್ತು. ಪಟ್ನಾದ ಬಹುತೇಕ ಪ್ರದೇಶಗಳು ಮುಳುಗಡೆಯಾಗಿದ್ದವು. ಭಾರೀ ಮಳೆ, ಪ್ರವಾಹದಿಂದ ಬಿಹಾರ, ಉತ್ತರ ಪ್ರದೇಶದಲ್ಲಿ ಕಳೆದ ಕೆಲವು ದಿನಗಳಲ್ಲಿ 110ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ.

ಇನ್ನಷ್ಟು...

ಬಿಹಾರದಲ್ಲಿ ಮಾತ್ರ ಪ್ರವಾಹವೇ?: ಪತ್ರಕರ್ತರ ವಿರುದ್ಧ ಹರಿಹಾಯ್ದ ನಿತೀಶ್ ಕುಮಾರ್

ಭಾರೀ ಮಳೆ, ಪ್ರವಾಹಕ್ಕೆ ತತ್ತರಿಸಿದ ಬಿಹಾರ: ಮೃತರ ಸಂಖ್ಯೆ 29ಕ್ಕೆ ಏರಿಕೆ

Post Comments (+)