ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಸ್ಥಾನ ವಿಧಾನಸಭೆ ಚುನಾವಣೆ: 43 ಶಾಸಕರಿಗೆ ಬಿಜೆಪಿ ಟಿಕೆಟ್‌ ಇಲ್ಲ

Last Updated 15 ನವೆಂಬರ್ 2018, 20:00 IST
ಅಕ್ಷರ ಗಾತ್ರ

ಜೈಪುರ: ರಾಜಸ್ಥಾನದಲ್ಲಿ ಮತ್ತೊಮ್ಮೆ ಅಧಿಕಾರದ ಗದ್ದುಗೆ ಹಿಡಿಯಲು ಹವಣಿಸುತ್ತಿರುವ ಬಿಜೆಪಿ, ಜಾಗರೂಕತೆಯಿಂದ ಟಿಕೆಟ್‌ ಹಂಚಿಕೆ ಮಾಡಿದೆ. ವಿವಾದಾತ್ಮಕ ಶಾಸಕರಾದ ಜ್ಞಾನದೇವ ಅಹುಜಾ ಹಾಗೂ ಭನ್ವಾರಿಲಾಲ್‌ ಸಿಂಘಾಲ್‌ ಅವರಿಗೆ ಟಿಕೆಟ್‌ ನಿರಾಕರಿಸಿದೆ.

ನಾಲ್ವರು ಸಚಿವರು ಸೇರಿದಂತೆ 43 ಹಾಲಿ ಶಾಸಕರಿಗೆ ಟಿಕೆಟ್‌ ನೀಡಿಲ್ಲ. ಬೇರೆ ಪಕ್ಷಗಳಿಂದ ಬಂದವರಿಗೆ ಮಣೆ ಹಾಕಿದೆ.ಕೆಲವರು ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್‌) ನಾಯಕರ ಮೂಲಕ ಒತ್ತಡ ತರಲು ಕೆಲವರು ಮುಂದಾಗಿದ್ದಾರೆ.

ಅಲ್ವರ್‌ ವಲಯದ ರಾಮಗಡ ಕ್ಷೇತ್ರ ಪ್ರತಿನಿಧಿಸುತ್ತಿರುವ ಅಹುಜಾ, 2016ರಲ್ಲಿ ವಿವಾದವೊಂದರಲ್ಲಿ ಸಿಲುಕಿದ್ದರು. ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯದ ಆವರಣಕ್ಕೆ ನೂರಾರು ಗರ್ಭಪಾತ ಚುಚ್ಚುಮದ್ದುಗಳು, ಸಾವಿರಾರು ನಿರೋಧ್‌ಗಳು, ಮದ್ಯದ ಬಾಟಲಿಗಳು ಮತ್ತು ಕುರುಕಲು ತಿಂಡಿಗಳು ನಿತ್ಯ ಬರುತ್ತವೆ ಎಂದು ಹೇಳಿದ್ದರು.

‘ಗೋವು ಕಳ್ಳ ಸಾಗಾಟ ಮಾಡುವವರನ್ನು ಕತ್ತರಿಸಲಾಗುವುದು. ಅಕ್ಬರ್‌ ಖಾನ್‌ ಹತ್ಯೆ ಪ್ರಕಣದಲ್ಲಿ ಸಿಲುಕಿದವರು ಅಮಾಯಕರು’ ಎಂದು ಅವರು ಹೇಳಿದ್ದೂ ವಿವಾದವಾಗಿತ್ತು. ಅಲ್ಲದೆ,‘ಜವಾಹರಲಾಲ್‌ ನೆಹರೂ ಅವರು ಪಂಡಿತ ಅಲ್ಲ, ಅವರು ಗೋವು ಮತ್ತು ಹಂದಿ ಮಾಂಸ ತಿನ್ನುತ್ತಿದ್ದರು’ ಎಂದು ಆಗಸ್ಟ್‌ನಲ್ಲಿ ಮತ್ತೊಂದು ಹೇಳಿಕೆ ನೀಡಿದ್ದರು.

ಮುಸ್ಲಿಮರ ವಿರುದ್ಧ ಹೇಳಿಕೆ ನೀಡಿ ವಿವಾವದನ್ನು ಮೈಮೇಲೆ ಎಳೆದುಕೊಂಡಿದ್ದ ಅಲ್ವರ್‌ ನಗರ ಕ್ಷೇತ್ರದ ಹಾಲಿ ಶಾಸಕ ಭನ್ವಾರಿಲಾಲ್‌ ಸಿಂಘಾಲ್‌ ಅವರಿಗೂ ಬಿಜೆಪಿ ಟಿಕೆಟ್‌ ನೀಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT