‘ಬಲಿಷ್ಠ ಸರ್ಕಾರ ಇಂದಿನ ಅಗತ್ಯ: ಮೈತ್ರಿಕೂಟ ವಿಫಲ ಪ್ರಯೋಗ’

7
ಬಿಜೆಪಿ ರಾಷ್ಟ್ರೀಯ ಮಂಡಳಿ ಸಮಾವೇಶದಲ್ಲಿ ಪ್ರಧಾನಿ ಮೋದಿ

‘ಬಲಿಷ್ಠ ಸರ್ಕಾರ ಇಂದಿನ ಅಗತ್ಯ: ಮೈತ್ರಿಕೂಟ ವಿಫಲ ಪ್ರಯೋಗ’

Published:
Updated:
Prajavani

ನವದೆಹಲಿ: ಮಹಾಮೈತ್ರಿಕೂಟ ಎಂಬ ವಿಫಲ ಪ್ರಯೋಗ ದೇಶದಲ್ಲಿ ಮತ್ತೆ ಆರಂಭವಾಗಿದೆ. ಆದರೆ, ಭ್ರಷ್ಟಾಚಾರ ಕೊನೆಗಾಣಿಸುವ ಬಲಿಷ್ಠ ಸರ್ಕಾರ ಇಂದಿನ ಅಗತ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ.

ದೇಶದ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಹಾಲಿ ಸರ್ಕಾರದ ವಿರುದ್ಧ ಒಂದೇ ಒಂದು ಆಪಾದನೆಯೂ ಇಲ್ಲ. ಭ್ರಷ್ಟಾಚಾರವಿಲ್ಲದೆ ಸರ್ಕಾರ ನಡೆಸುವುದು ಸಾಧ್ಯವಿದೆ ಎಂದು ಬಿಜೆಪಿ ಸಾಬೀತು ಮಾಡಿ ತೋರಿಸಿದೆ ಎಂದರು.

ಈ ಹಿಂದಿನ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ದೇಶವನ್ನು ಕತ್ತಲಿಗೆ ನೂಕಿತ್ತು. ಹತ್ತು ವರ್ಷಗಳ ಬಹುಮುಖ್ಯ ಕಾಲಘಟ್ಟವೊಂದು ಭ್ರಷ್ಟಾಚಾರ ಮತ್ತು ಹಗರಣಗಳಲ್ಲಿ ಹೂತು ಹೋಗಿ ವ್ಯರ್ಥವಾಯಿತು ಎಂದು ಅವರು ಶನಿವಾರ ಬಿಜೆಪಿ ರಾಷ್ಟ್ರೀಯ ಮಂಡಳಿ ಸಮಾವೇಶದಲ್ಲಿ ಹೇಳಿದರು.

ರಾಜಕಾರಣವನ್ನು ಸೈದ್ಧಾಂತಿಕ ನೆಲೆಗಟ್ಟಿನ ಮೇಲೆ ಮಾಡಲಾಗುತ್ತದೆ. ದೂರದೃಷ್ಟಿಯಿಂದ ಮೈತ್ರಿಕೂಟ ರಚಿಸಲಾಗುತ್ತದೆ. ಆದರೆ, ಮೊಟ್ಟ ಮೊದಲ ಬಾರಿಗೆ ರಾಜಕಾರಣ ಮತ್ತು ಮೈತ್ರಿಕೂಟ ರಚನೆ 'ಒಬ್ಬ ವ್ಯಕ್ತಿಯ ವಿರುದ್ಧ' ನಡೆಯತೊಡಗಿದೆ ಎಂದು ಟೀಕಿಸಿದರು.

**

ಸಮಾವೇಶದ ಪ್ರಮುಖ ಅಂಶಗಳು

* ಪ್ರಧಾನಿ ಮೋದಿಯವರನ್ನು ದೇಶದ ಜನ ಪುನಃ ಆಯ್ಕೆ ಮಾಡುವುದು ನಿಶ್ಚಿತ. ಭಾರತವನ್ನು ಮಹಾನ್ ರಾಷ್ಟ್ರ ಆಗಿಸುವ ಮೋದಿಯವರ ದೂರದೃಷ್ಟಿಯನ್ನು ಬೆಂಬಲಿಸಲು ಮನವಿ

* ಸ್ಥಿರತೆ ಮತ್ತು ಅಸ್ಥಿರತೆ, ಪ್ರಾಮಾಣಿಕ ಮತ್ತು ಸಾಹಸಿ ನಾಯಕ ಮತ್ತು ನಾಯಕನೇ ದಿಕ್ಕಿಲ್ಲದ ಅವಕಾಶವಾದಿ ಮೈತ್ರಿ ಹಾಗೂ ಮಜಬೂತಾದ ಸರ್ಕಾರ- ಅಸ್ಥಿರ ಸರ್ಕಾರದ ಆಯ್ಕೆ ಜನರ ಮುಂದಿದೆ

* ಇತ್ತೀಚೆಗೆ ಜರುಗಿದ ವಿಧಾನಸಭಾ ಚುನಾವಣಾ ಫಲಿತಾಂಶಗಳಿಂದ ನಾವು ಪಾಠ ಕಲಿಯುವುದೂ ಇದೆ.   

* ಭಾರತಕ್ಕಾಗಿ ಅಥವಾ ಭಾರತದ ಜನತೆಗಾಗಿ ಯಾವುದೇ ಕಾರ್ಯಕ್ರಮ ಅಥವಾ ಕಾರ್ಯಸೂಚಿಯನ್ನು ಈ ಮಹಾಮೈತ್ರಿ ಹೊಂದಿಲ್ಲ. 

* ನರೇಂದ್ರ ಮೋದಿ ಅವರಂತಹ ಪ್ರತಿಷ್ಠಿತ ನಾಯಕರೊಬ್ಬರನ್ನು ವಿರೋಧಿಸುತ್ತಿರುವ ಅವಕಾಶವಾದಿ ಮೈತ್ರಿಕೂಟದ ನಾಯಕ ಯಾರು ಎಂಬುದು ಕೂಡ ಈವರೆಗೆ ತಿಳಿದಿಲ್ಲ 

* ದಲಿತರು, ಬಡವರು ಹಾಗೂ ದುರ್ಬಲವರ್ಗದವರ ಏಳಿಗೆಗೆ ಕಾಂಗ್ರೆಸ್ ಪಕ್ಷ ಕಳೆದ 60 ವರ್ಷಗಳಲ್ಲಿ ಮಾಡಲಾಗದೆ ಹೋದ ಕೆಲಸ ಕಾರ್ಯಗಳನ್ನು ಬಿಜೆಪಿ ಕಳೆದ ನಾಲ್ಕೂವರೆ ವರ್ಷಗಳಲ್ಲಿ ಮಾಡಿ ತೋರಿಸಿದೆ.

**

ರಾಮ ಮಂದಿರ ನಿರ್ಮಾಣಕ್ಕೆ ಬಿಜೆಪಿ ಬದ್ಧವಿದೆ. ಆದರೆ, ಕಾನೂನು ಪ್ರಕ್ರಿಯೆಗೆ ಕಾಂಗ್ರೆಸ್‌ ಅಡ್ಡಗಾಲು ಹಾಕುತ್ತಿದೆ.

–ನರೇಂದ್ರ ಮೋದಿ, ಪ್ರಧಾನಿ

ಬರಹ ಇಷ್ಟವಾಯಿತೆ?

 • 7

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !