ಪ್ರಿಯಾಂಕಾ ಗಾಂಧಿ ಬಗ್ಗೆ ಸೆಕ್ಸಿಸ್ಟ್ ಹೇಳಿಕೆ ನೀಡಿದ ಬಿಜೆಪಿ ಸಂಸದ

7

ಪ್ರಿಯಾಂಕಾ ಗಾಂಧಿ ಬಗ್ಗೆ ಸೆಕ್ಸಿಸ್ಟ್ ಹೇಳಿಕೆ ನೀಡಿದ ಬಿಜೆಪಿ ಸಂಸದ

Published:
Updated:

ನವದೆಹಲಿ: ದೆಹಲಿಯಲ್ಲಿರುವಾಗ ಪ್ರಿಯಾಂಕಾ ಗಾಂಧಿ ವಾದ್ರಾ ಜೀನ್ಸ್ ಮತ್ತು ಟಾಪ್ ಧರಿಸುತ್ತಾರೆ. ಆದರೆ ಗ್ರಾಮೀಣ ಪ್ರದೇಶಗಳಿಗೆ ಭೇಟಿ ನೀಡುವಾಗ ಸೀರೆ ಮತ್ತು ಸಿಂಧೂರ ತೊಟ್ಟುಕೊಳ್ಳುತ್ತಾರೆ ಎಂಬ ಸೆಕ್ಸಿಸ್ಟ್ ಹೇಳಿಕೆ ನೀಡಿ ಉತ್ತರ ಪ್ರದೇಶದ ಬಿಜೆಪಿ ಸಂಸದ ಹರೀಶ್ ದ್ವಿವೇದಿ ಸುದ್ದಿಯಾಗಿದ್ದಾರೆ.

ಉತ್ತರ ಪ್ರದೇಶದ  ಬಸ್ತಿ ಜಿಲ್ಲೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ದ್ವಿವೇದಿ, ರಾಹುಲ್ ಮತ್ತು ಪ್ರಿಯಾಂಕಾ ಇಬ್ಬರೂ ವಿಫಲರಾಗಿದ್ದಾರೆ ಎಂದಿದ್ದಾರೆ.

ಬಿಜೆಪಿ ನಾಯಕರು ಪ್ರಿಯಾಂಕಾ ಗಾಂಧಿ ಬಗ್ಗೆ ಸೆಕ್ಸಿಸ್ಟ್ ಹೇಳಿಕೆ ನೀಡಿದ್ದು ಇದೇ ಮೊದಲೇನೂ ಅಲ್ಲ.

ಜನವರಿಯಲ್ಲಿ ಬಿಹಾರ ಸಚಿವ ವಿನೋದ್ ನಾರಾಯಣ್ ಝಾ ಪ್ರಿಯಾಂಕಾ ಸುಂದರಿ ಹೌದು ಆದರೆ ಅವರು ರಾಜಕೀಯದಲ್ಲಿ ಸಾಧನೆಗಳೇನೂ ಮಾಡಿಲ್ಲ ಎಂದಿದ್ದರು. ಚೆಂದದ ಮುಖ ನೋಡಿ ಯಾರೂ ಮತ ಹಾಕುವುದಿಲ್ಲ. ಆಕೆ ಭೂಹಗರಣ ಮತ್ತು ಭ್ರಷ್ಟಾಚಾರ ಪ್ರಕರಣದಲ್ಲಿ ಭಾಗಿಯಾಗಿರುವ ರಾಬರ್ಟ್ ವಾರ್ದಾ ಅವರ ಹೆಂಡತಿ. ಆಕೆ ತುಂಬಾ ಚೆಲುವೆ, ಆದರೆ ರಾಜಕೀಯ ಸಾಧನೆ ಆಗಲೀ, ಪ್ರತಿಭೆಯಾಗಲೀ ಆಕೆಗಿಲ್ಲ ಎಂದು ಹೇಳಿದ್ದರು.

ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ, ಪ್ರಿಯಾಂಕಾ ಗಾಂಧಿಗೆ ಬೈಪೋಲಾರ್ ಸಮಸ್ಯೆ ಇದ್ದು ಆಕೆ ಸಾರ್ವಜನಿಕ ಜೀವನವನ್ನು ಮುನ್ನಡೆಸಲು ಸಮರ್ಥಳಾಗಿಲ್ಲ ಎಂದಿದ್ದರು.

ಇನ್ನೊಬ್ಬ ಬಿಜೆಪಿ ನಾಯಕ ಕೈಲಾಶ್ ವಿಜಯ್‍ವರಿಗ್ಯಾ ಅವರು ಕಾಂಗ್ರೆಸ್ ಪಕ್ಷ ಚಾಕ್ಲೆಟಿ ಫೇಸ್‍ಗಳನ್ನು ಮುಂದಿರಿಸಿ ಚುನಾವಣೆ ಕಣಕ್ಕಿಳಿದಿವೆ ಎಂದಿದ್ದರು.  ಕೆಲವೊಬ್ಬರು ಕರೀನಾ ಕಪೂರ್ ಹೆಸರು ಹೇಳಿದರೆ ಇನ್ನು ಕೆಲವರು ಸಲ್ಮಾನ್ ಖಾನ್ ಹೆಸರು ಹೇಳುತ್ತಾರೆ. ಈಗ ಅವರು (ಕಾಂಗ್ರೆಸ್) ಪ್ರಿಯಾಂಕಾ ಗಾಂಧಿಯನ್ನು ಕರೆ ತಂದಿದ್ದಾರೆ ಎಂದು ಹೇಳಿದ್ದರು.
 

ಬರಹ ಇಷ್ಟವಾಯಿತೆ?

 • 5

  Happy
 • 2

  Amused
 • 0

  Sad
 • 0

  Frustrated
 • 5

  Angry

Comments:

0 comments

Write the first review for this !