ಅನುಮತಿ ಪಡೆದೇ ಪ್ರಸಾರ: ನಮೋ ಟಿವಿಗಾಗಿ ಚುನಾವಣಾ ಆಯೋಗಕ್ಕೆ ಬಿಜೆಪಿ ಮೊರೆ

ಶನಿವಾರ, ಏಪ್ರಿಲ್ 20, 2019
27 °C

ಅನುಮತಿ ಪಡೆದೇ ಪ್ರಸಾರ: ನಮೋ ಟಿವಿಗಾಗಿ ಚುನಾವಣಾ ಆಯೋಗಕ್ಕೆ ಬಿಜೆಪಿ ಮೊರೆ

Published:
Updated:

ನವದೆಹಲಿ: ನಮೋ ಟಿ.ವಿ ಚಾನೆಲ್‌ನ ವಿವಾದಕ್ಕೆ ಸಂಬಂಧಿಸಿದಂತೆ ಇಂದು ಕೇಂದ್ರ ಚುನಾವಣೆ ಆಯೋಗಕ್ಕೆ ಮನವಿ ಸಲ್ಲಿಕೆ ಮಾಡಿರುವ ಬಿಜೆಪಿ, ‘ಆಯೋಗದಿಂದ ಅನುಮತಿ ಪಡೆದ ಕಾರ್ಯಕ್ರಮಗಳನ್ನಷ್ಟೇ ನಮೋ ಟಿ.ವಿಯಲ್ಲಿ ಪ್ರಸಾರ ಮಾಡುತ್ತೇವೆ, ಕಾರ್ಯಕ್ರಮಗಳ ವಸ್ತು ವಿಷಯವನ್ನು ಮೊದಲು ಚುನಾವಣೆ ಆಯೋಗದ ಪರಿಶೀಲನೆಗೆ ಸಲ್ಲಿಸುತ್ತೇವೆ,’ ಎಂದು ಹೇಳಿದೆ. 

ನಮೋ ಟಿವಿ ಚಾನೆಲ್‌ನಲ್ಲಿನ ಕಾರ್ಯಕ್ರಮಗಳನ್ನು ಅನುಮತಿ ಪಡೆಯದಂತೆ ಪ್ರಸಾರ ಮಾಡಬಾರದು ಎಂದು ಚುನಾವಣೆ ಆಯೋಗ ಇತ್ತೀಚೆಗಷ್ಟೇ ಬಿಜೆಪಿಗೆ ತಾಕೀತು ಮಾಡಿತ್ತು. ಅದರಲ್ಲೂ ಪ್ರಮುಖವಾಗಿ ಮೋದಿ ಅವರ ಕಾರ್ಯಕ್ರಮ ಮತ್ತು ಭಾಷಣವನ್ನು ಅನುಮತಿ ಪಡೆಯದೇ ಪ್ರಸಾರ ಮಾಡುವಂತಿಲ್ಲ ಎಂದು ಹೇಳಿತ್ತು. 

‘ನಮೋ ಟಿ.ವಿ ಕುರಿತು ಆಯೋಗ ನೀಡಿದ್ದ ಆದೇಶ ಸಂಬಂಧ ಬಿಜೆಪಿ ಶುಕ್ರವಾರ ಸಂಜೆ ಪ್ರತಿಕ್ರಿಯೆ ನೀಡಿದೆ. ಪೂರ್ವಾನುಮತಿ ಪಡೆದ ಕಾರ್ಯಕ್ರಮಗಳನ್ನು ಮಾತ್ರ ಪ್ರಸಾರ ಮಾಡುವುದಾಗಿ ಬಿಜೆಪಿ ತಿಳಿಸಿದೆ. ಅದರಂತೆ, ಮಾಧ್ಯಮ ದೃಢೀಕರಣ ಮತ್ತು ಉಸ್ತುವಾರಿ ಸಮಿತಿಯು ನಮೋ ಟಿ.ವಿಯ ವಸ್ತು ವಿಷಯಗಳನ್ನು ಪರಿಶೀಲನೆ ನಡೆಸಲಿದೆ,’ ಎಂದು ಕೇಂದ್ರ ಚುನಾವಣೆ ಆಯೋಗ ತಿಳಿಸಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ. 

ಕೇಂದ್ರ ಚುನಾವಣೆ ಆಯೋಗದ ಆದೇಶದ ಹಿನ್ನೆಲೆಯಲ್ಲಿ ದೆಹಲಿಯ ಮುಖ್ಯ ಚುನಾವಣಾ ಅಧಿಕಾರಿಯೂ ನಮೋ ಟಿ.ವಿಯ ಕಾರ್ಯಕ್ರಮಗಳ ಉಸ್ತುವಾರಿಗೆ ಇಬ್ಬರು ಅಧಿಕಾರಿಗಳನ್ನು ನೇಮಕ ಮಾಡಿದ್ದಾರೆ.  

ಪ್ರಧಾನಿ ಮೋದಿ ಭಾಷಣ, ಕಾರ್ಯಕ್ರಮಗಳ ಪ್ರಸಾರಕ್ಕಾಗಿ ಆರಂಭಗೊಂಡಿದ್ದ ನಮೋ ಟಿ.ವಿಯ ಬಗ್ಗೆ ಆಮ್‌ ಆದ್ಮಿ ಪಕ್ಷ ಸೇರಿದಂತೆ ಹಲವು ವಿರೋಧ ಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿದ್ದವು. ಈ ನಡುವೆ ಸ್ವತಃ ಮೋದಿ ಅವರೇ ಆ ಟಿ.ವಿಯನ್ನು ಯಾರು ನಿರ್ವಹಿಸುತ್ತಿದ್ದಾರೆ ಎಂಬುದೇ ಗೊತ್ತಿಲ್ಲ ಎಂದು ಹೇಳಿದ್ದರು. ಆದರೆ, ಟಿವಿಗೆ ಚುನಾವಣೆ ಆಯೋಗ ಅಂಕುಶ ಹಾಕುತ್ತಲೇ, ಬಿಜೆಪಿಯು ತನ್ನ ಐಟಿ ವಿಭಾಗವೇ ಟಿವಿಯನ್ನು ನಿರ್ಹವಿಸುತ್ತಿದೆ ಎಂದು ಹೇಳಿಕೊಂಡಿತ್ತು. ಇದೀಗ ಕಾರ್ಯಕ್ರಮಗಳನ್ನು ಪೂರ್ವಾನುಮತಿ ಪಡೆದೇ ಕಾರ್ಯಕ್ರಮ ಪ್ರಸಾರ ಮಾಡುವುದಾಗಿ ಸ್ವತಃ ಬಿಜೆಪಿ ಕೇಂದ್ರ ಚುನಾವಣೆ ಆಯೋಗಕ್ಕೆ ಮನವಿ ಸಲ್ಲಿಸಿದೆ. 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 6

  Angry

Comments:

0 comments

Write the first review for this !