ಬುಧವಾರ, ಫೆಬ್ರವರಿ 26, 2020
19 °C

ಉಜ್ವಲ ಎಲ್‌ಪಿಜಿ ಸಿಲಿಂಡರ್: ತನಿಖೆಗೆ ಸಿಎಜಿ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ‘ಪ್ರಧಾನಮಂತ್ರಿ ಉಜ್ವಲ ಯೋಜನೆ’ಯಡಿ ಬಿಪಿಎಲ್ ಕುಟುಂಬಗಳಿಗೆ ಸಬ್ಸಿಡಿ ದರದ ಅಡುಗೆ ಅನಿಲ ಸಿಲಿಂಡರ್ ವಿತರಣೆಯಲ್ಲಿ ದೋಷ ಕಂಡುಬಂದಿದೆ ಎಂದು ಮಹಾಲೇಖಪಾಲರ ವರದಿ (ಸಿಎಜಿ) ತಿಳಿಸಿದೆ. 2016-2018ರ ಅವಧಿಯಲ್ಲಿ  2.61 ಲಕ್ಷ ಫಲಾನುಭವಿಯಗಳು ಒಂದೇ ದಿನದಲ್ಲಿ 2ರಿಂದ 20 ಸಿಲಿಂಡರ್‌ಗಳನ್ನು ಖರೀದಿಸಿದ ನಿದರ್ಶನ ಕಂಡುಬಂದಿವೆ. 

ಬುಧವಾರ ಸಂಸತ್ತಿನಲ್ಲಿ ಮಂಡನೆಯಾದ ಸಿಎಜಿ ವರದಿಯಲ್ಲಿ ಈ ಅಂಶಗಳು ಉಲ್ಲೇಖವಾಗಿವೆ. ವಾಣಿಜ್ಯ ಉದ್ದೇಶಕ್ಕೆ ಸಬ್ಸಿಡಿ ಅಡುಗೆ ಅನಿಲ ಸಿಲಿಂಡರ್‌ಗಳು ಬಳಕೆಯಾಗದಂತೆ ತಡೆಯುವ ನಿಟ್ಟಿನಲ್ಲಿ ಸರ್ಕಾರ ತನಿಖೆಗೆ ಮುಂದಾಗಬೇಕು ಎಂದು ವರದಿ ಅಭಿಪ್ರಾಯಪಟ್ಟಿದೆ. 

‘1,300 ಫಲಾನುಭವಿಗಳು ದಿನಕ್ಕೆ 12 ಸಿಲಿಂಡರ್ ಖರೀದಿಸಿದ ಉದಾಹರಣೆ ಇದೆ. ಒಂದು ಬಾರಿ ಒಂದೇ ಸಿಲಿಂಡರ್ ವಿತರಿಸುವ ವ್ಯಸಸ್ಥೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಲು ಸರ್ಕಾರಿ ಸ್ವಾಮ್ಯದ ಐಒಸಿಎಲ್ ಹಾಗೂ ಎಚ್‌ಪಿಸಿಎಲ್‌ ಕಂಪನಿಗಳು ಸೋತಿವೆ’ ಎಂದು ವರದಿ ಅಭಿಪ್ರಾಯಪಟ್ಟಿದೆ. 

ಯೋಜನೆಯಡಿ ಒಂದು ವರ್ಷ ಪೂರೈಸಿರುವ ಗ್ರಾಹಕರ ಪೈಕಿ ಶೇ 17.61ರಷ್ಟು ಮಂದಿ ಎರಡನೇ ಸಿಲಿಂಡರ್ ಪಡೆದಿಲ್ಲ. ಶೇ 33ರಷ್ಟು ಫಲಾನುಭವಿಗಳು ಎರಡೂವರೆ ವರ್ಷಗಳಲ್ಲಿ 1ರಿಂದ 3 ಸಿಲಿಂಡರ್‌ ಮಾತ್ರ ಬಳಕೆ ಮಾಡಿದ್ದಾರೆ. 5 ಕೆ.ಜಿ ತೂಕದ ಸಿಲಿಂಡರ್ ವಿತರಣೆಯೂ ಅಸಮರ್ಪಕವಾಗಿದೆ. 225 ಎಲ್‌ಪಿಜಿ ಸಂಪರ್ಕಗಳು ಅಪ್ರಾಪ್ತ ವಯಸ್ಸಿನವರ ಪಾಲಾಗಿವೆ ಎಂದು ವರದಿ ತಿಳಿಸಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು