ಮಂಗಳವಾರ, ಆಗಸ್ಟ್ 20, 2019
25 °C

‘ಇಲಿಗಳಿಂದ ಇವಿಎಂ ರಕ್ಷಿಸಿ’

Published:
Updated:
Prajavani

ಮಥುರಾ: ಇಲ್ಲಿನ ಮಂಡಿ ಸಮಿತಿ ಪ್ರದೇಶದ ಮತಯಂತ್ರಗಳನ್ನು ಇರಿಸಿರುವ ಸ್ಟ್ರಾಂಗ್‌ರೂಂನಲ್ಲಿ ಇಲಿಗಳ ಹಾವಳಿ ಇದ್ದು, ಮತಯಂತ್ರಗಳನ್ನು ಹಾನಿಪಡಿಸಬಹುದು ಎಂದು ಅಭ್ಯರ್ಥಿಯೊಬ್ಬರು ಆತಂಕ ವ್ಯಕ್ತಪಡಿಸಿದ್ದಾರೆ. ಆದರೆ, ಇದನ್ನು ಅಧಿಕಾರಿಗಳು ತಳ್ಳಿಹಾಕಿದ್ದಾರೆ.

ಮಥುರಾ ಕ್ಷೇತ್ರದ, ರಾಷ್ಟ್ರೀಯ ಲೋಕದಳದ ಅಭ್ಯರ್ಥಿ ನರೇಂದ್ರ ಸಿಂಗ್ ವಾರದ ಹಿಂದೆ ಈ ಸಂಬಂಧ ಮನವಿ ಸಲ್ಲಿಸಿದ್ದು, ಮತಯಂತ್ರ ಇಟ್ಟಿರುವ ಸ್ಟ್ರಾಂಗ್‌ ರೂಂ ಸುತ್ತಲೂ ತಂತಿ ಜಾಲರಿ ಅಳವಡಿಸಬೇಕು ಎಂದು ಕೋರಿದ್ದರು.

‘ಮತಯಂತ್ರಗಳನ್ನು ಇಟ್ಟಿರುವ ಕೊಠಡಿ ಸುರಕ್ಷಿತವಾಗಿದೆ. ಇಲಿಗಳಿಂದ ಯಾವುದೇ ಆತಂಕವಿಲ್ಲ’ ಎಂದು ಜಿಲ್ಲಾ ಚುನಾವಣಾಧಿಕಾರಿ ಸರ್ವಜ್ಞರಾಮ್‌ ಮಿಶ್ರಾ ಹೇಳಿದ್ದಾರೆ. ಕೊಠಡಿ ಹಾಗೂ ಸುತ್ತಲಿನ ಪರಿಸರವನ್ನು ಅಧಿಕಾರಿಗಳು ಪರಿಶೀಲಿಸಿದ್ದಾರೆ. ಅದಾದ ಬಳಿಕ ಮತಯಂತ್ರಗಳಿಗೆ ಅಪಾಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Post Comments (+)