ಸೋಮವಾರ, ಸೆಪ್ಟೆಂಬರ್ 16, 2019
29 °C

ಹಸು ಕಳವು ಶಂಕೆ: ಬಿಹಾರದಲ್ಲಿ ವ್ಯಕ್ತಿಯನ್ನು ಹೊಡೆದು ಸಾಯಿಸಿದರು!

Published:
Updated:

ಅರಾರಿಯಾ: ಹಸು ಕದ್ದಿದ್ದಾರೆ ಎಂಬ ಶಂಕೆಯಿಂದ ವ್ಯಕ್ತಿಯೊಬ್ಬನನ್ನು ಹೊಡೆದು ಕೊಂದ ಘಟನೆ ಬಿಹಾರದ ಅರಾರಿಯಾ ಜಿಲ್ಲೆಯಲ್ಲಿ ನಡೆದಿದೆ.

ಇಲ್ಲಿನ ದಕ್ ಹರಿಪುರ್ ಗ್ರಾಮದ ರಾಬರ್ಟ್‌ಗಂಜ್ ಪೊಲೀಸ್ ಠಾಣೆ  ವ್ಯಾಪ್ತಿಯಲ್ಲಿ ಗುರುವಾರ ಈ ಘಟನೆ ನಡೆದಿದೆ.

ಗ್ರಾಮದವರಿಂದ ಹಲ್ಲೆಗೊಳಗಾಗಿ ಸಾವಿಗೀಡಾದ ವ್ಯಕ್ತಿಯನ್ನು ಮಹೇಶ್ ಯಾದವ್ (44) ಎಂದು ಗುರುತಿಸಲಾಗಿದೆ. ಮಹೇಶ್  ಮತ್ತು ಇನ್ನಿಬ್ಬರು ಹಸುಗಳನ್ನು ಕಳವು ಮಾಡಲು ಹೋದಾಗ ಸಿಕ್ಕಿಬಿದ್ದರು ಎನ್ನಲಾಗಿದೆ. 

ಗ್ರಾಮಸ್ಥರಿಂದ ಹಲ್ಲೆಗೊಳಗಾಗಿ ಮಹೇಶ್ ಅವರ ಸಾವು ಸಂಭವಿಸಿದೆ ಎಂದು ಪೊಲೀಸ್ ಅಧಿಕಾರಿ ಶಿವ್ ಶರಣ್ ಸಾಹ್ ಹೇಳಿದ್ದಾರೆ.

ಮಹೇಶ್ ಬೇರೊಂದು ಗ್ರಾಮದವರಾಗಿದ್ದು ಈ ಹಿಂದೆ ಜಾನುವಾರು ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದರು.   ವ್ಯಕ್ತಿಯನ್ನು ಹೊಡೆದು ಕೊಂದ ಈ ಪ್ರಕರಣ ಬಗ್ಗೆ ತನಿಖೆ ಆರಂಭವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

Post Comments (+)