ಬುಧವಾರ, ಆಗಸ್ಟ್ 4, 2021
22 °C

ಹಣ ದುರ್ಬಳಕೆ: ಜಿವಿಕೆ ಗ್ರೂಪ್‍ ಅಧ್ಯಕ್ಷ, ಪುತ್ರನ ವಿರುದ್ಧ ಸಿಬಿಐ ಮೊಕದ್ದಮೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ವಿಮಾನನಿಲ್ದಾಣ ಉನ್ನತೀಕರಣ, ನಿರ್ವಹಣೆ ಕುರಿತು ನಡೆದ ₹ 705 ಕೋಟಿ ಅವ್ಯವಹಾರ ಸಂಬಂಧ ಜಿವಿಕೆ ಗ್ರೂಪ್‍ ಅಧ್ಯಕ್ಷ ವೆಂಕಟ ಕೃಷ್ಣ ರೆಡ್ಡಿ ಗುಣುಪತಿ ಮತ್ತು ಅವರ ಪುತ್ರನ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿದೆ. ಪುತ್ರ ಜಿ.ವಿ.ಸಂಜಯ್ ರೆಡ್ಡಿ ಮುಂಬೈ ಅಂತರರಾಷ್ಟ್ರೀಯ ವಿಮಾನನಿಲ್ದಾಣ ಸಂಸ್ಥೆಯಲ್ಲಿ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ.

ಮುಂಬೈ ಅಂತರರಾಷ್ಟ್ರೀಯ ವಿಮಾನನಿಲ್ದಾಣದ (ಎಂಐಎಎಲ್‍) ಉನ್ನತೀಕರಣ ಮತ್ತು ಮೇಲ್ವಿಚಾರಣೆ ಸಂಬಂಧ ಜಿವಿಕೆ ಗ್ರೂಪ್‍ ಭಾಗವಾಗಿರುವ ಜಿವಿ‌ಕೆ ಏರ್ ಪೋರ್ಟ್ ಹೋಲ್ಡಿಂಗ್ ಲಿಮಿಟೆಡ್‍ ಜೊತೆಗೆ ಜಂಟಿ ಉದ್ಯಮ ಸ್ಥಾಪಿಸಿತ್ತು.

2006ರ ಏಪ್ರಿಲ್ 4 ರಂದು ಭಾರತ ವಿಮಾನ ಪ್ರಾಧಿಕಾರವು ಎಂಐಎಎಲ್‍ ಜೊತೆಗೆ ಮುಂಬೈ ವಿಮಾನನಿಲ್ದಾಣದ ಆಧುನೀಕರಣ, ಮೇಲ್ವಿಚಾರಣೆ, ನಿರ್ವಹಣೆ ಕುರಿತಂತೆ ಒಡಂಬಡಿಕೆ ಮಾಡಿಕೊಂಡಿತ್ತು.

ಜಿವಿಕೆ ಗ್ರೂಪ್‍ ಸಂಸ್ಥೆಯ ಪ್ರವರ್ತಕರು ಹಾಗೂ ಎಎಐ ಅಧಿಕಾರಿಗಳ ಸಹಕಾರದಲ್ಲಿ ಭಿನ್ನ ಮಾರ್ಗಗಳಲ್ಲಿ ಹಣ ವರ್ಗಾವಣೆ, ದುರ್ಬಳಕೆಗೆ ಕಾರಣರಾಗಿದ್ದರು. ಜಿವಿಕೆ ಗ್ರೂಪ್‍ ಎಂಐಎಎಲ್‍ನ ಸುಮಾರು ₹395 ಕೋಟಿ ಮೀಸಲು ನಿಧಿಯನ್ನು ದುರ್ಬಳಕೆ ಮಾಡಿಕೊಂಡಿತ್ತು ಎಂದು ಸಿಬಿಐ ಆರೋಪಿಸಿದೆ.

ಎಂಎಐಎಲ್‍ ಸಿಬ್ಬಂದಿ ಅಲ್ಲದವರಿಗೂ ವೇತನ, ವೆಚ್ಚ ಪಾವತಿಸುವ ಮೂಲಕ ವಿಮಾನನಿಲ್ದಾಣದ ಆದಾಯಕ್ಕೆ ಧಕ್ಕೆ ತರಲಾಗಿದೆ. ಎಂಎಐಎಲ್‍ ನಿಧಿ ಬಳಸಿ ವೈಯಕ್ತಿಕ, ಕೌಟುಂಬಿಕ ವೆಚ್ಚವನ್ನು ನಿಭಾಯಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಇಬ್ಬರಲ್ಲದೇ ಎಂಐಎಎಲ್‍, ಜಿವಿಕೆ ಏರ್ ಪೋರ್ಟ್ ಹೋಲ್ಡಿಂಗ್ ಲಿಮಿಟೆಡ್ ಹಾಗೂ ಒಂಬತ್ತು ಇತರೆ ಖಾಸಗಿ ಕಂಪನಿಗಳು, ಎಎಐನ  ಹಲವು ಅಧಿಕಾರಿಗಳ ವಿರುದ್ಧವೂ ಮೊಕದ್ದಮೆ ದಾಖಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು