ಬುಧವಾರ, ಜೂನ್ 3, 2020
27 °C

ಯೆಸ್‌ ಬ್ಯಾಂಕ್‌ ಹಗರಣ | ವಧವಾನ್‌ ಸಹೋದರರ ಬಂಧನ ವಿಸ್ತರಣೆ

ಪಿಟಿಐ Updated:

ಅಕ್ಷರ ಗಾತ್ರ : | |

ಮುಂಬೈ: ಯೆಸ್‌ ಬ್ಯಾಂಕ್‌ ಹಗರಣಕ್ಕೆ ಸಂಬಂಧಿಸಿದಂತೆ ಸಹೋದರರಾದ ಕಪಿಲ್‌ ವಧವಾನ್‌ ಮತ್ತು ಧೀರಜ್‌ ವಧವಾನ್‌ ಅವರ ಬಂಧನದ ಅವಧಿಯನ್ನು ಮೇ 10ರವರೆಗೆ ವಿಸ್ತರಿಸಲಾಗಿದೆ.

ಡಿಎಚ್ಎಫ್‌ಎಲ್‌ ಪ್ರವರ್ತಕರಾದ ಕಪಿಲ್‌ ವಧವಾನ್‌ ಮತ್ತು ಆರ್‌ಕೆಡಬ್ಲೂ ಡೆವಲಪರ್‌ನ ಪ್ರವರ್ತಕರಾದ ಧೀರಜ್‌ ವಧವಾನ್‌ ಅವರನ್ನು ಕಳೆದ ತಿಂಗಳು ಮಹಾಬಳೇಶ್ವರದಲ್ಲಿ ಬಂಧಿಸಲಾಗಿತ್ತು.

ವಧವಾನ್‌ ಸಹೋದರರ ಜತೆ ಕ್ರಿಮಿನಲ್‌ ಸಂಚು ರೂಪಿಸಿದ್ದ ಯೆಸ್‌ ಬ್ಯಾಂಕ್‌ ಸಿಇಒ ರಾಣಾ ಕಪೂರ್‌, ಡಿಎಚ್ಎಫ್‌ಎಲ್‌ಗೆ ಹಣಕಾಸಿನ ನೆರವು ನೀಡಿದ್ದರು.

ಈ ಯೋಜನೆ ಅನ್ವಯ 2018ರ ಏಪ್ರಿಲ್‌ ಮತ್ತು ಜೂನ್‌ ನಡುವೆ ಯೆಸ್‌ ಬ್ಯಾಂಕ್‌ ಡಿಎಚ್‌ಎಫ್‌ಎಲ್‌ನಲ್ಲಿ ₹3700 ಕೋಟಿ ಹೂಡಿಕೆ ಮಾಡಿತ್ತು. ಇದಕ್ಕಾಗಿ, ವಧವಾನ್‌ ಸಹೋದರರು, ಕಪೂರ್‌ ಮತ್ತು ಅವರ ಕುಟುಂಬದ ಸದಸ್ಯರಿಗೆ ವಿವಿಧ ರೂಪದಲ್ಲಿ ₹600 ಕೋಟಿ ಲಂಚ ನೀಡಿದ್ದರು ಎಂದು ಸಿಬಿಐ ಎಫ್‌ಐಆರ್‌ ದಾಖಲಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು