ಮಂಗಳವಾರ, ಫೆಬ್ರವರಿ 18, 2020
30 °C

ಮೂರು ‘ಮಿಲಿಟರಿ ಕಮಾಂಡ್‌’ಗಳ ರಚನೆ: ಬಿಪಿನ್‌ ರಾವತ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಶಸ್ತ್ರಾಸ್ತ್ರ ಪಡೆಗಳನ್ನು ಒಗ್ಗೂಡಿಸಿ ಮೂರು ಮಿಲಿಟರಿ ಕಮಾಂಡ್‌ಗಳನ್ನು ರಚಿಸಲು ಉದ್ದೇಶಿಸಲಾಗಿದೆ ಎಂದು ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್‌ ಬಿಪಿನ್‌ ರಾವತ್‌ ತಿಳಿಸಿದ್ದಾರೆ.

ದೇಶದ ಮಿಲಿಟರಿ ಇತಿಹಾಸದಲ್ಲೇ ಇದು ಅತಿ ದೊಡ್ಡ ಪುನರ್‌ ರಚನೆಯ ಕಾರ್ಯ ಎಂದು ಹೇಳಲಾಗಿದೆ.

ಸೇನೆ, ವಾಯು ಪಡೆ ಮತ್ತು ನೌಕಾಪಡೆಗಳನ್ನು ಒಗ್ಗೂಡಿಸಿ ಕಮಾಂಡ್‌ಗಳನ್ನು ರಚಿಸಲು ಉದ್ದೇಶಿಸಲಾಗಿದೆ.

ದೇಶದ ವಾಯು ಪ್ರದೇಶದಲ್ಲಿ ನಡೆಯುವ ಎಲ್ಲ ರೀತಿಯ ವೈಮಾನಿಕ ಕಾರ್ಯಾಚರಣೆಗಳ ಉಸ್ತುವಾರಿಗೆ ‘ವಾಯು ರಕ್ಷಣಾ ಕಮಾಂಡ್‌’, ಸಮುದ್ರ ಪ್ರದೇಶದಲ್ಲಿ ನಡೆಯುವ ನೌಕಾ ಕಾರ್ಯಾಚರಣೆಗೆ ‘ಪೆನಿನ್ಸುಲಾ ಕಮಾಂಡ್‌’ ಹಾಗೂ ‘ಲಾಜಿಸ್ಟಿಕ್ಸ್‌ ಕಮಾಂಡ್‌’ ರಚಿಸುವ ಪ್ರಸ್ತಾವವಿದೆ ಎಂದು ರಾವತ್‌ ಮಂಗಳವಾರ ತಿಳಿಸಿದ್ದಾರೆ.

ಈ ಕಮಾಂಡ್‌ಗಳನ್ನು ಮೂರು ವರ್ಷಗಳಲ್ಲಿ ರಚಿಸಲಾಗುವುದು. ಈ ವಿಷಯದ ಕುರಿತು ಸೇನೆ, ವಾಯು ಮತ್ತು ನೌಕಾಪಡೆಗಳ ಮುಖ್ಯಸ್ಥರ ಜತೆ ಸಮಾಲೋಚನೆ ನಡೆಸಿದ ಬಳಿಕ ಅಂತಿಮ ರೂಪುರೇಷೆ ನೀಡಲಾಗುವುದು. ಈ ಮೂವರು ಇನ್ನೂ ಉತ್ತಮ ಅಭಿಪ್ರಾಯಗಳನ್ನು ನೀಡಬಹುದು’ ಎಂದು ತಿಳಿಸಿದರು.

ಶಸ್ತ್ರಾಸ್ತ್ರ ಪಡೆಗಳನ್ನು ಒಗ್ಗೂಡಿಸುವ ಕಾರ್ಯ ತ್ವರಿತವಾಗಿ ನಡೆಯಬೇಕಾಗಿದೆ. ಇವುಗಳಲ್ಲಿ ವಾಯು ರಕ್ಷಣಾ ಕಮಾಂಡ್‌ ಅನ್ನು ಕಾಲಮಿತಿಯಲ್ಲೇ ರಚಿಸಬಹುದಾಗಿದೆ. ವಾಯು ಪ್ರದೇಶದ ಜವಾಬ್ದಾರಿ ವಾಯು ಪಡೆಯದ್ದಾಗಿದೆ. ಹೀಗಾಗಿ, ವಾಯು ಪ್ರದೇಶದ ಭದ್ರತೆಯನ್ನು ಕಾಪಾಡುವ ಜವಾಬ್ದಾರಿಯನ್ನು ಒಂದೇ ಪಡೆಗೆ ವಹಿಸುವುದು ಸೂಕ್ತ ಎಂದರು.

‘ಲಾಜಿಸ್ಟಿಕ್ಸ್‌ ಕಮಾಂಡ್‌’ ರಚನೆಯಿಂದ ಮಾನವ ಸಂಪನ್ಮೂಲದ ನಿರ್ವಹಣೆಯನ್ನು ಸಮರ್ಪಕವಾಗಿ ಮಾಡಬೇಕಾಗಿದೆ. ವೈದ್ಯಕೀಯ ಸಂಪನ್ಮೂಲದ ಉದಾಹರಣೆಯನ್ನು ನೀಡಿದ ಅವರು, ಈಗಿರುವ ಎಲ್ಲ ಮೂರು ರಕ್ಷಣಾ ಪಡೆಗಳಲ್ಲಿ ಕೆಲವೆಡೆ ವೈದ್ಯರು ಹೆಚ್ಚಿನ ಸಂಖ್ಯೆಯಲ್ಲಿದ್ದರೆ, ಕೆಲವೆಡೆ ಕೊರತೆ ಇದೆ. ಹೀಗಾಗಿ, ಮಾನವ ಸಂಪನ್ಮೂಲದ ಸಮರ್ಪಕ ಬಳಕೆಯಾಗಬೇಕಾಗಿದೆ ಎಂದು ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು