ಮಧ್ಯಮ ವರ್ಗ, ರೈತ, ಕಾರ್ಮಿಕರಿಗೆ ಬಜೆಟ್‌ನಲ್ಲಿ ಏನೇನಿದೆ? ಇಲ್ಲಿದೆ ಮಾಹಿತಿ

ನವದೆಹಲಿ: ಮಧ್ಯಮ ವರ್ಗಕ್ಕಾಗಿ ಕೇಂದ್ರ ಸರ್ಕಾರ ಮಧ್ಯಂತರ ಬಜೆಟ್‌ನಲ್ಲಿ ಹಲವು ಕ್ರಮಗಳನ್ನು ಘೋಷಣೆ ಮಾಡಿದೆ. ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ಮಧ್ಯಮ ವರ್ಗದವರ ಓಲೈಕೆಗೆ ಯತ್ನಿಸಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು ₹5 ಲಕ್ಷಕ್ಕೆ ವಿಸ್ತರಣೆ ಮಾಡಿರುವುದು, ರೈತರಿಗೆ ವಾರ್ಷಿಕ ₹6,000 ಆದಾಯ ಬೆಂಬಲ ನೀಡುವುದು, ಅಸಂಘಟಿತ ವಲಯದ ಕಾರ್ಮಿಕರಿಗೆ ಪಿಂಚಣಿ... ಹೀಗೆ ಮಧ್ಯಮ ವರ್ಗ, ರೈತರು, ಕಾರ್ಮಿಕರನ್ನು ಗಮನದಲ್ಲಿಟ್ಟುಕೊಂಡು ಬಜೆಟ್‌ನಲ್ಲಿ ಘೋಷಿಸಲಾಗಿರುವ ಪ್ರಮುಖ ಯೋಜನೆಗಳ ಮಾಹಿತಿ ಇಲ್ಲಿದೆ.
ಆದಾಯ ತೆರಿಗೆದಾರರಿಗೆ ನೆಮ್ಮದಿ
* ಇನ್ನು ₹5 ಲಕ್ಷದವರೆಗೆ ಆದಾಯ ಗಳಿಸುವವರು ಆದಾಯ ತೆರಿಗೆ ಕಟ್ಟಬೇಕಿಲ್ಲ
* ಸ್ಟ್ಯಾಂಡರ್ಡ್ ಡಿಡಕ್ಷನ್ ಮಿತಿ ₹40,000ದಿಂದ ₹50,000ಕ್ಕೆ ವಿಸ್ತರಣೆ
ಹೂಡಿಕೆ ಮೇಲಿನ ತೆರಿಗೆ ವಿನಾಯಿತಿ: ಪಿಎಫ್ ಮತ್ತು ಇತರ ಮಾನ್ಯಮಾಡಲಾದ ಈಕ್ವಿಟಿಗಳಲ್ಲಿ ಹೂಡಿಕೆ ಮಾಡುವವರು ₹6.5 ಲಕ್ಷದವರೆಗೆ ಆದಾಯವಿದ್ದರೂ ತೆರಿಗೆ ವಿನಾಯಿತಿ ಪಡೆಯಬಹುದು
* ಮನೆ ಬಾಡಿಗೆ ಮೇಲಿನ ವಿನಾಯಿತಿ ಮಿತಿ ₹1.8 ಲಕ್ಷದಿಂದ ₹2.4 ಲಕ್ಷಕ್ಕೆ ವಿಸ್ತರಣೆ
* ಅಂಚೆ ಕಚೇರಿಗಳಲ್ಲಿ ಮತ್ತು ಬ್ಯಾಂಕುಗಳಲ್ಲಿಟ್ಟಿರುವ ಠೇವಣಿಯಿಂದ ಬರುವ ₹40,000 ವರೆಗಿನ ಬಡ್ಡಿಗೆ ಆದಾಯ ತೆರಿಗೆ ಮುಕ್ತ
* ಸೆಕ್ಷನ್ 54ರ ಅನ್ವಯ ಬಂಡವಾಳ ಲಾಭದ ಮೇಲಿನ ತೆರಿಗೆ ವಿನಾಯಿತಿಯನ್ನು ₹2 ಕೋಟಿವರೆಗೂ ಪಡೆಯಬಹುದು
* 2 ಮನೆಗಳನ್ನು ಹೊಂದಿರುವವರೂ ಬಂಡವಾಳ ಲಾಭದ ಮೇಲಿನ ವಿನಾಯಿತಿ ಲಾಭ ಪಡೆಯಬಹುದು
ಇದನ್ನೂ ಓದಿ: ರೈಲ್ವೆಗೆ ₹1.6 ಲಕ್ಷ ಕೋಟಿ: ಕಾವಲುರಹಿತ ಕ್ರಾಸಿಂಗ್ಗಳು ಬಂದ್
ತೆರಿಗೆ ಸುಧಾರಣಾ ಕ್ರಮಗಳು
* ಐಟಿ ರಿಟರ್ನ್ಸ್ ಸಲ್ಲಿಕೆ ಪ್ರಕ್ರಿಯೆ 24 ಗಂಟೆಗಳ ಒಳಗೆ ಮುಗಿಯಲಿದ್ದು, ತಕ್ಷಣವೇ ಮರುಪಾವತಿಗೂ ಕ್ರಮ
* ಐಟಿ ರಿಟರ್ನ್ಸ್‌ನ ಮೌಲ್ಯಮಾಪನ ಮತ್ತು ಪರಿಶೀಲನೆಯನ್ನು ಅಧಿಕಾರಿಗಳ ಮಧ್ಯಪ್ರವೇಶವಿಲ್ಲದೇ ನಡೆಸಬಹುದಾದಂತಹ ಎಲೆಕ್ಟ್ರಾನಿಕ್ ವ್ಯವಸ್ಥೆ ಮುಂದಿನ ಎರಡು ವರ್ಷಗಳಲ್ಲಿ ಜಾರಿ
ಇದನ್ನೂ ಓದಿ: ನಾನು ರೂಪಿಸಿದ್ದ ಯೋಜನೆಯ ಅರ್ಧ ಕಾಪಿ ಹೊಡೆದಿದ್ದಾರೆ: ಸಿದ್ದರಾಮಯ್ಯ ಆರೋಪ
ರೈತರಿಗೆ ಏನೇನು?
* ಸಣ್ಣ ಮತ್ತು ಮಧ್ಯಮ ರೈತರಿಗೆ ವಾರ್ಷಿಕ ₹6,000 ಆದಾಯ ಬೆಂಬಲ, 2 ಹೆಕ್ಟೇರ್‌ವರೆಗೆ ಜಮೀನು ಹೊಂದಿರುವ ರೈತರಿಗೆ ಅನ್ವಯ
* ಮೂರು ಕಂತುಗಳಲ್ಲಿ ಆದಾಯ ಬೆಂಬಲ ವಿತರಣೆಗೆ ವ್ಯವಸ್ಥೆ, 2018ರ ಡಿಸೆಂಬರ್ 1ರಿಂದಲೇ ಪೂರ್ವಾನ್ವಯ
* ನೈಸರ್ಗಿಕ ವಿಕೋಪಗಳಿಂದ ತೊಂದರೆಗೊಳಗಾದ ರೈತರಿಗೆ ಬಡ್ಡಿಯಲ್ಲಿ ಶೇ 2ರ ವಿನಾಯಿತಿ
* ನಿಗದಿತ ಅವಧಿಯೊಳಗೆ ಸಾಲ ಮರುಪಾವತಿ ಮಾಡುವ ರೈತರಿಗೆ ಬಡ್ಡಿಯಲ್ಲಿ ಶೇ 3ರ ವಿನಾಯಿತಿ
* ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ಸಾಲ ಪಡೆಯುವ ಪಶುಸಂಗೋಪನೆದಾರರಿಗೆ ಮತ್ತು ಮೀನುಗಾರರಿಗೆ ಬಡ್ಡಿಯಲ್ಲಿ ಶೇ 2ರ ವಿನಾಯಿತಿ
* 22 ಬೆಳೆಗಳ ಕನಿಷ್ಠ ಬೆಂಬಲ ಬೆಲೆಯಲ್ಲಿ ಒಂದೂವರೆ ಪಟ್ಟು ಏರಿಕೆ
ಇದನ್ನೂ ಓದಿ: ಕೇಂದ್ರ ಬಜೆಟ್ 2019: ರಕ್ಷಣಾ ವೆಚ್ಚ ₹3 ಲಕ್ಷ ಕೋಟಿಗೆ ಏರಿಕೆ
ಕಾರ್ಮಿಕರಿಗೆ ಏನೇನು?
* ಅಸಂಘಟಿತ ವಲಯದ ಕಾರ್ಮಿಕರಿಗಾಗಿ ‘ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನ್‌ಧನ್’ ಪಿಂಚಣಿ ಯೋಜನೆ
* ತಿಂಗಳ ಆದಾಯ ₹15,000 ವರೆಗೆ ಇರುವವರು ಅರ್ಹರು
* ತಿಂಗಳಿಗೆ ₹100 ಪಾವತಿಸುವ ಮೂಲಕ ಈ ಪಿಂಚಣಿ ಯೋಜನೆಗೆ ಹೆಸರು ನೋಂದಾಯಿಸಬಹುದು. ನಿವೃತ್ತಿ ವಯಸ್ಸಾದ ನಂತರ ತಿಂಗಳಿಗೆ ₹3,000 ಪಿಂಚಣಿ ದೊರೆಯಲಿದೆ.
* ಈ ಯೋಜನೆಗಾಗಿ ಸರ್ಕಾರ ₹500 ಕೋಟಿ ವ್ಯಯಿಸಲಿದೆ.
ಹಳ್ಳಿಗಳಿಗೆ ಕೊಡುಗೆ...
* ನರೇಗಾ ಯೋಜನೆಗೆ ₹60,000 ಕೋಟಿ ಅನುದಾನ
* ಗ್ರಾಮ ಸಡಕ್ ಯೋಜನೆಯಡಿ ಹಳ್ಳಿಗಳಲ್ಲಿ ರಸ್ತೆ ನಿರ್ಮಾಣಕ್ಕೆ ₹19,000 ಕೋಟಿ ಅನುದಾನ
ಇತರ ಸಾಮಾಜಿಕ ಯೋಜನೆಗಳು
* 1 ಲಕ್ಷ ಡಿಜಿಟಲ್ ಗ್ರಾಮಗಳ ನಿರ್ಮಾಣ ಮಾಡಲಿದೆ ಸರ್ಕಾರ
* ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ ಗ್ರಾಮೀಣ ಪ್ರದೇಶಗಳಲ್ಲಿ 8 ಕೋಟಿಯಷ್ಟು ಉಚಿತ ಎಲ್‌ಪಿಜಿ ಸಂಪರ್ಕ ಕಲ್ಪಿಸಲು ಉದ್ದೇಶಿಸಲಾಗಿದ್ದು, ಈಗಾಗಲೇ 6 ಕೋಟಿ ಸಂಪರ್ಕ ಕಲ್ಪಿಸಲಾಗಿದೆ
* ಆಯುಷ್ಮಾನ್ ಭಾರತ್ ಯೋಜನೆ ಮೂಲಕ ಈವರೆಗೆ 50 ಕೋಟಿ ಜನರಿಗೆ ಸಹಾಯ; ಬಡವರ ₹3000 ಕೋಟಿ ಉಳಿತಾಯ
ಜಿಎಸ್‌ಟಿ (ಸರಕು ಮತ್ತು ಸೇವಾ ತೆರಿಗೆ) ಸುಧಾರಣೆ
* 2013–14ನೇ ಸಾಲಿನಲ್ಲಿ ₹6.3 ಲಕ್ಷ ಇದ್ದ ನೇರ ತೆರಿಗೆ ಸಂಗ್ರಹ ಈಗ ₹12 ಲಕ್ಷಕ್ಕೆ ಏರಿಕೆಯಾಗಿದೆ. ಈ ಅವಧಿಯಲ್ಲಿ ಮೂಲ ತೆರಿಗೆ ₹3.79 ಕೋಟಿಯಿಂದ ₹6.85 ಕೋಟಿ ತಲುಪಿದೆ
* ತೆರಿಗೆ ಪಾವತಿದಾರರ ಸಂಖ್ಯೆ 3.79 ಕೋಟಿಯಿಂದ 6.85 ಕೋಟಿ ತಲುಪಿದೆ
* ₹5 ಕೋಟಿಗಿಂತ ಕಡಿಮೆ ವಾರ್ಷಿಕ ವಹಿವಾಟು ಹೊಂದಿರುವ ಉದ್ದಿಮೆದಾರರಿಗೆ ತ್ರೈಮಾಸಿಕ ರಿಟರ್ನ್ಸ್ ಸಲ್ಲಿಕೆಗೆ ಅವಕಾಶ
* 2019ರ ಜನವರಿಯಲ್ಲಿ ಜಿಎಸ್‌ಟಿ ಸಂಗ್ರಹ ₹1 ಲಕ್ಷ ಕೋಟಿ ಮೊತ್ತ ದಾಟಿದೆ
ಇನ್ನಷ್ಟು...
* ಹೆಚ್ಚಿದೆ ಆದಾಯ, ಪ್ರಕಾಶಿಸುತ್ತಿದೆ ಭಾರತ: ಪೀಯೂಷ್ ಗೋಯಲ್
* ಅಸಂಘಟಿತ ವಲಯದ ಕಾರ್ಮಿಕರಿಗಾಗಿ ‘ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನ್‌ಧನ್’
* ‘ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ’ ಸ್ಥಾಪನೆ, ರೈತರ ಖಾತೆಗೆ ₹6 ಸಾವಿರ
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.