ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಆರ್‌ಎಫ್‌ ಹೆಚ್ಚಳ: ಸರ್ಕಾರ ಆದೇಶ

ವಿಜ್ಞಾನ ಕ್ಷೇತ್ರದಲ್ಲಿ ಸಂಶೋಧನೆ ನಡೆಸುವ ವಿದ್ಯಾರ್ಥಿಗಳಿಗೆ ಪ್ರಯೋಜನ
Last Updated 30 ಜನವರಿ 2019, 20:16 IST
ಅಕ್ಷರ ಗಾತ್ರ

ನವದೆಹಲಿ: ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಸಂಶೋಧನೆ ನಡೆಸುವ ವಿದ್ಯಾರ್ಥಿಗಳಿಗೆ ಫೆಲೋಷಿಪ್‌ ಹೆಚ್ಚಿಸಿ ಕೇಂದ್ರ ಸರ್ಕಾರ ಬುಧವಾರ ಆದೇಶ ಹೊರಡಿಸಿದೆ.

ಕೇಂದ್ರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಫೆಲೋಷಿಪ್‌ ಹೆಚ್ಚಿಸಿ ಆದೇಶ ಹೊರಡಿಸಿದ್ದು, ಇದು ಜನವರಿ 1ರಿಂದಲೇ ಪೂರ್ವಾನ್ವಯ ಆಗಲಿದೆ ಎಂದು ಹೇಳಿದೆ. ಸಾವಿರಾರು ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯಲಿದ್ದಾರೆ.

ಕಿರಿಯ ಸಂಶೋಧಕರು (ಜೆಆರ್‌ಎಫ್‌), ಹಿರಿಯ ಸಂಶೋಧಕರು (ಎಸ್‌ಆರ್‌ಎಫ್‌), ಸಂಶೋಧನೆ, ಬೋಧನೆ, ವಿನ್ಯಾಸ ಹಾಗೂ ಅಭಿವೃದ್ಧಿಯಲ್ಲಿಕನಿಷ್ಠ ಮೂರು ವರ್ಷ ಅನುಭವ ಹೊಂದಿರುವ ಸಂಶೋಧನಾ ಸಹಾಯಕರನ್ನು ಆರ್‌ಎ–1,ಆರ್‌ಎ–2,ಆರ್‌ಎ–3 ಎಂಬ ಮೂರು ವರ್ಗಗಳಲ್ಲಿ ವಿಂಗಡಿಸಲಾಗಿದೆ. ಈ ಮೂರೂ ಗುಂಪುಗಳ ಫೆಲೋಷಿಪ್‌ ಕೂಡ ಹೆಚ್ಚಿಸಲಾಗಿದೆ.

ಹಾಸ್ಟೆಲ್‌ ಸಿಗದ ಸಂಶೋಧಕರಿಗೆ ಮನೆ ಬಾಡಿಗೆ ಭತ್ಯೆ ಒದಗಿಸಲಾಗಿದೆ. ವೈದ್ಯಕೀಯ ಭತ್ಯೆ ಸಹ ನೀಡಲಾಗುವುದು ಎಂದು ಆದೇಶದಲ್ಲಿ ಹೇಳಲಾಗಿದೆ.

ಫೆಲೋಷಿಪ್‌ ಹೆಚ್ಚಿಸಲು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ, ಡಿಆರ್‌ಡಿಒ ಮತ್ತು ಸಿಎಸ್‌ಐಆರ್‌ ಸೇರಿ ವಿವಿಧ ಸಂಸ್ಥೆಗಳ ಸಂಶೋಧನಾ ವಿದ್ಯಾರ್ಥಿಗಳು ದೇಶದಾದ್ಯಂತ ಪ್ರತಿಭಟನೆ ನಡೆಸಿದ್ದರು. ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ವಿಶ್ವವಿದ್ಯಾಲಯ ಅನುದಾನ ಆಯೋಗಕ್ಕೆ ಮನವಿ ಸಲ್ಲಿಸಿದ್ದರು. ಮುಖ್ಯ ವೈಜ್ಞಾನಿಕ ಸಲಹೆಗಾರ ಕೆ. ವಿಜಯರಾಘವನ್‌, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಕಾರ್ಯದರ್ಶಿ ಅಶುತೋಷ್‌ ಶರ್ಮಾ ಅವರನ್ನೂ ಭೇಟಿಯಾಗಿದ್ದರು.

ನಾಲ್ಕು ವರ್ಷಗಳ ನಂತರ 2014ರಲ್ಲಿ ಫೆಲೋಷಿಪ್‌ ಪ್ರಮಾಣದಲ್ಲಿ ಶೇ 56ರಷ್ಟು ಹೆಚ್ಚಳ ಮಾಡಲಾಗಿತ್ತು. ಈ ಬಾರಿ ಶೇ 80ರಷ್ಟು ಫೆಲೋಷಿಪ್‌ ಹೆಚ್ಚಿಸಲುಸಂಶೋಧನಾ ವಿದ್ಯಾರ್ಥಿಗಳು ಬೇಡಿಕೆ ಇಟ್ಟಿದ್ದರು. ಸರ್ಕಾರದ ಈ ಆದೇಶದಿಂದ ಅವರಿಗೆ ಅಷ್ಟೇನೂ ತೃಪ್ತಿಯಾಗಿಲ್ಲ ಎನ್ನಲಾಗಿದೆ.

*
ಕೇಂದ್ರದ ಸಹಯೋಗದಲ್ಲಿ ಸಂಶೋಧನೆ ನಡೆಸುತ್ತಿರುವ 60,000 ವಿದ್ಯಾರ್ಥಿಗಳಿಗೆ ಪ್ರಯೋಜನವಾಗಲಿದೆ.ಫೆಲೋಷಿಪ್ ಪ್ರಮಾಣ ಹೆಚ್ಚಿಸುವುದು ನಮ್ಮ ಗುರಿ.
–ಅಶುತೋಷ್‌ ಶರ್ಮಾ, ಕಾರ್ಯದರ್ಶಿ, ಕೇಂದ್ರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ

*
ಪ್ರಯೋಗಾಲಯಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುವವರಿಗೆ ಬಹುಮಾನ, ಫೆಲೋಷಿಪ್‌ ಹೆಚ್ಚಿಸುವುದಕ್ಕೆ ವಿಧಾನ ರೂಪಿಸಲು ಸಮಿತಿ ರಚಿಸಲಾಗುವುದು.
–ಕೆ.ವಿಜಯರಾಘವನ್‌, ಮುಖ್ಯ ವೈಜ್ಞಾನಿಕ ಸಲಹೆಗಾರ, ಕೇಂದ್ರ ಸರ್ಕಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT