ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಂದ್ರಯಾನದ ಕಕ್ಷೆ ಎತ್ತರ ಹೆಚ್ಚಳ ಯಶಸ್ವಿ: ಇಸ್ರೋ

Last Updated 24 ಜುಲೈ 2019, 16:07 IST
ಅಕ್ಷರ ಗಾತ್ರ

ಬೆಂಗಳೂರು (ಪಿಟಿಐ): ಚಂದ್ರಯಾನ–2ರ ಕಕ್ಷೆಯ ಎತ್ತರವನ್ನು ಬುಧವಾರ ಯಶಸ್ವಿಯಾಗಿ ಹೆಚ್ಚಿಸಲಾಗಿದೆ ಎಂದು ಇಸ್ರೊ ತಿಳಿಸಿದೆ.

ಬುಧವಾರ ಮಧ್ಯಾಹ್ನ 2.52 ಗಂಟೆಗೆ ಎಂಜಿನ್‌ ಅನ್ನು 57 ಸೆಕೆಂಡ್‌ಗಳ ಕಾಲ ಸಕ್ರಿಯಗೊಳಿಸಿ ಈ ಕಾರ್ಯಾಚರಣೆ ನಡೆಸಲಾಗಿದೆ. ಕಕ್ಷೆಯನ್ನು ಎತ್ತರಿಸುವ ಇನ್ನೊಂದು ಹಂತದ ಕಾರ್ಯಾಚರಣೆಯು ಶುಕ್ರವಾರ ನಸುಕಿನ 1 ಗಂಟೆಯ ವೇಳೆಗೆ ನಡೆಯಲಿದೆ ಎಂದು ಇಸ್ರೊ ತಿಳಿಸಿದೆ.

ಇಸ್ರೊದ ಮಹತ್ವಾಕಾಂಕ್ಷೆಯ ಯೋಜನೆ, ‘ಚಂದ್ರಯಾನ–2’ಅನ್ನು ಸೋಮವಾರ (ಜುಲೈ 22) ಮಧ್ಯಾಹ್ನ ಶ್ರೀಹರಿಕೋಟಾದಿಂದ ಉಡಾವಣೆ ಮಾಡಲಾಗಿತ್ತು. ಸೆಪ್ಟೆಂಬರ್‌ 7ರಂದು ಇದು ಚಂದ್ರನ ಮೇಲೆ ಇಳಿಯಲಿದೆ.

ಇನ್ನಷ್ಟು ಓದಿಗೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT