ಸೋಮವಾರ, ಜೂಲೈ 13, 2020
24 °C

20 ಮಕ್ಕಳನ್ನು ಒತ್ತೆಯಾಗಿರಿಸಿದ ಕೊಲೆ ಆರೋಪಿ

ಪಿಟಿಐ Updated:

ಅಕ್ಷರ ಗಾತ್ರ : | |

ಫಾರುಖಾಬಾದ್‌ (ಉತ್ತರಪ್ರದೇಶ): ಕೊಲೆ ಆರೋಪ ಎದುರಿಸುತ್ತಿರುವ ವ್ಯಕ್ತಿಯೊಬ್ಬ ಇಲ್ಲಿನ ಕಸಾರಿಯಾ ಎಂಬ ಹಳ್ಳಿಯ ಮನೆಯೊಂದರಲ್ಲಿ 20 ಮಕ್ಕಳನ್ನು ಒತ್ತೆಯಾಳಾಗಿರಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. 

‘ಹುಟ್ಟು ಹಬ್ಬದ ಆಚರಣೆಗೆಂದು ಮಕ್ಕಳನ್ನು ಆಹ್ವಾನಿಸಿದ ಸುಭಾಶ್‌ ಭಾತಮ್‌ ಎಂಬಾತ, ಮಾತುಕತೆ ನಡೆಸಲು ಯತ್ನಿಸಿದವರ ಮೇಲೆ ಮನೆಯೊಳಗಿನಿಂದಲೇ ಗುಂಡು ಹಾರಿಸಿದ್ದಾನೆ. ಮಕ್ಕಳ ರಕ್ಷಣೆಗೆ ಆದ್ಯತೆ ನೀಡಲಾಗಿದ್ದು, ಅಗತ್ಯ ಬಿದ್ದಲ್ಲಿ ಕಾರ್ಯಾಚರಣೆಗೆ ಎನ್‌ಎಸ್‌ಜಿಯನ್ನು ಕರೆಯಲಾಗುವುದು’ ಎಂದು ಡಿಜಿಪಿ ಒ.ಪಿ.ಸಿಂಗ್‌ ತಿಳಿಸಿದರು.ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಪರಿಸ್ಥಿತಿ ಅವಲೋಕಿಸುತ್ತಿದ್ದಾರೆ. ಆರೋಪಿ ಮಾನಸಿಕ ಅಸ್ವಸ್ಥನಿರಬಹುದು ಎಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು