ಗುರುವಾರ , ಸೆಪ್ಟೆಂಬರ್ 19, 2019
29 °C

ಬಿಜೆಪಿ ಮುಖಂಡ ಚಿನ್ಮಯಾನಂದ ವಿರುದ್ಧ ಅತ್ಯಾಚಾರ ಆರೋಪ

Published:
Updated:
Prajavani

ಷಾಜಹಾನಪುರ, ಉತ್ತರ ಪ್ರದೇಶ : ‘ಬಿಜೆಪಿ ಮುಖಂಡ ಸ್ವಾಮಿ ಚಿನ್ಮಯಾನಂದ ನನ್ನ ಮೇಲೆ ಅತ್ಯಾಚಾರ ನಡೆಸಿದ್ದು, ಒಂದು ವರ್ಷಗಳವರೆಗೆ ದೌರ್ಜನ್ಯ ಎಸಗಿದ್ದಾರೆ’ ಎಂದು ಸ್ನಾತಕೋತ್ತರ ವಿದ್ಯಾರ್ಥಿನಿ ಸೋಮವಾರ ಆರೋಪಿಸಿದ್ದಾರೆ. 

ಈ ಕುರಿತು ದೂರು ನೀಡಿದರೂ ಷಾಜಹಾನಪುರ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳುತ್ತಿಲ್ಲ ಎಂದು ಮಾಧ್ಯಮದವರೆದರು ದೂರಿದ್ದಾರೆ.

‘ದೆಹಲಿಯ ಲೋಧಿ ರಸ್ತೆಯ ಪೊಲೀಸ್‌ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ. ಅಲ್ಲಿಂದ ಷಾಜಹಾನಪುರ ಠಾಣೆಗೆ ಪ್ರಕರಣವನ್ನು ವರ್ಗಾಯಿಸಲಾಗಿದೆ’ ಎಂದು ಅವರು ಹೇಳಿದ್ದಾರೆ.

‘ವಿಶೇಷ ತನಿಖಾ ತಂಡವು ಭಾನುವಾರ 11 ಗಂಟೆಗಳ ಕಾಲ ವಿಚಾರಣೆ ನಡೆಸಿತು. ಅತ್ಯಾಚಾರ ನಡೆಸಿರುವ ಬಗ್ಗೆ ಅವರಿಗೆ ಮಾಹಿತಿ ನೀಡಿದ್ದೇನೆ. ಎಲ್ಲ ವಿಷಯವನ್ನು ತಿಳಿಸಿದ್ದರೂ ಈವರೆಗೆ ಚಿನ್ಮಯಾನಂದ್‌ನನ್ನು ಬಂಧಿಸಿಲ್ಲ’ ಎಂದು ವಿದ್ಯಾರ್ಥಿನಿ ಆಪಾದಿಸಿದ್ದಾರೆ.

Post Comments (+)