ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಭತ್ತದ ಕಳ್ಳಿ’ಯಿಂದ ಕಲಿತ ಪಾಠ: ಆನೆಗಳೊಂದಿಗೆ ಸಹಬಾಳ್ವೆಗೆ ಅಸ್ಸಾಂ ರೈತರ ಯೋಚನೆ

Last Updated 12 ಆಗಸ್ಟ್ 2019, 11:22 IST
ಅಕ್ಷರ ಗಾತ್ರ

ಆ ಊರಿನಲ್ಲಿ ‘ಭತ್ತದ ಕಳ್ಳಿ’ ಎನ್ನುವುದು ಜನಪ್ರಿಯ ಹೆಸರು. ಓ ಅವ್ಳಾ ಎಂದು ಎಲ್ಲರೂ ತಮ್ಮ ಮನೆ ಮಗಳನ್ನು ನೆನೆದವರಂತೆ ಮಾತನಾಡುತ್ತಾರೆ. ಈ ಭತ್ತದ ಕಳ್ಳಿ ಎನ್ನುವುದು ಮಹಿಳೆಗೆ ಇಟ್ಟ ಅನ್ವರ್ಥನಾಮ ಎಂದುಕೊಂಡಿರಾ ಹೇಗೆ?

ಅಸ್ಸಾಂನ ತೇಜ್‌ಪುರ ಹೊರವಲಯದಗದ್ದೆಗಳಿಗೆ ನುಗ್ಗುತ್ತಿದ್ದ ಕಾಡಾನೆಗಳ ಹಿಂಡುಭತ್ತದ ಪೈರನ್ನು ಇಷ್ಟಪಟ್ಟುತಿನ್ನುತ್ತಿತ್ತು. ಒಮ್ಮೆ ಹೀಗೆ ಬಂದ ಹಿಂಡಿನಲ್ಲಿದ್ದ ಹೆಣ್ಣಾನೆಯೊಂದು ಗದ್ದೆಯಲ್ಲಿಯೇ ಸತ್ತು ಹೋಯಿತು. ಅದಕ್ಕೆ ಅಲ್ಲಿನ ಜನರು ಭತ್ತದ ಕಳ್ಳಿ ಎಂದು ಪ್ರೀತಿಯಿಂದ ನಾಮಕರಣ ಮಾಡಿದರು.

ರೋನ್‌ಘಂಗ್‌ ಮತ್ತು ಹಥಿಕುಲಿ ಗ್ರಾಮಗಳ ಜನರು ಆನೆಗಳಿಗಾಗಿ ಒಂದು ಬೆಳೆ ಬೆಳೆಯುವ ಮೂಲಕ ತಾವೂಭತ್ತ ಉಳಿಸಿಕೊಳ್ಳುವವಿನೂತನ ಆಲೋಚನೆ ಮಾಡಿದರು. ಮೊದಲ ಬಿತ್ತನೆ ಮುಗಿದು ಪೈರು ಮೇಲೆದ್ದ ಬಂದಾಗ ಆನೆಗಳು ಗದ್ದೆಗಳಿಗೆ ಬಂದು ಬೇಕಾದಷ್ಟು ಮೇದು ಕಾಡಿಗೆ ಹಿಂದಿರುಗುತ್ತವೆ. ನಂತರ ಜನರು ತಮಗಾಗಿ ಮತ್ತೊಂದು ಬೆಳೆ ಬಿತ್ತುವುದು ಈಗ ವಾಡಿಕೆಯಾಗಿದೆ.

ಇದು ಎಷ್ಟರಮಟ್ಟಿಗೆ ಪರಿಣಾಮಕಾರಿ ಎನ್ನುವುದಕ್ಕೆ ಕಾಲವೇ ಉತ್ತರ ಹೇಳಬೇಕು. ಆದರೂ ಇಲ್ಲಿನ ಜನರ ಆಲೋಚನೆ ಮಾತ್ರ ದೇಶದ ಗಮನ ಸೆಳೆದಿರುವುದು ಸುಳ್ಳಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT